ಜುಲೈ 1ರಿಂದ ವಿದ್ಯುತ್ ದರ ಹೆಚ್ಚಳಕ್ಕೆ ಮುಂದಾದ ಬೆಸ್ಕಾಂ

Update: 2020-06-24 17:52 GMT

ಬೆಂಗಳೂರು, ಜೂ.24: ಜುಲೈ 1ರಿಂದ ಪ್ರತಿ ಯೂನಿಟ್ ವಿದ್ಯುತ್ ದರ ಹನ್ನೆರಡು ಪೈಸೆ ಹೆಚ್ಚಳ ಮಾಡುವುದಕ್ಕೆ ಬೆಸ್ಕಾಂ ಮುಂದಾಗಿದೆ.

ಈ ಬಗ್ಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದ್ದು, ಜುಲೈ 1ರಿಂದ ಡಿಸೆಂಬರ್ 2020ರ ಬಿಲ್ಲಿಂಗ್ ಅವಧಿಯಲ್ಲಿ ಪ್ರತಿ ಯೂನಿಟ್‍ಗೆ 12 ಪೈಸೆ ಇಂಧನ ವ್ಯತ್ಯಾಸ ದರವನ್ನಾಗಿ ಪಡೆಯಲು ಅನುಮೋದಿಸಿದೆ.

ಈಗಾಗಲೇ ಪ್ರತಿ ನಿತ್ಯ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದ್ದು, ಕಂಗಾಲಾಗಿರುವ ಜನಸಾಮಾನ್ಯರಿಗೆ ಈಗ ಮುಂದಿನ ತಿಂಗಳಿಂದ ಕರೆಂಟ್ ಬಿಲ್ ಹೆಚ್ಚಳದ ಬರೆಯೂ ಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News