ಬೆಂಗಳೂರು: ಕೊರೋನ ಸೋಂಕಿತ ಮಹಿಳೆ ಆಸ್ಪತ್ರೆಯಲ್ಲೇ ಆತ್ಮಹತ್ಯೆ

Update: 2020-06-26 12:14 GMT

ಬೆಂಗಳೂರು, ಜೂ.26: ಕೋವಿಡ್-19 ಸೋಂಕಿಗೆ ಗುರಿಯಾಗಿದ್ದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುಣಿಗಲ್ ಮೂಲದ ಮಹಿಳೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮಹಿಳೆ ಇಲ್ಲಿನ ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿ ಕುಟುಂಬಸ್ಥರೊಂದಿಗೆ ವಾಸವಿದ್ದರು. ಜೂ.18ರಂದು ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಮಲ್ಲೇಶ್ವರಂನಲ್ಲಿರುವ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ, ಮಹಿಳೆ ಆಸ್ಪತ್ರೆಗೆ ದಾಖಲಾದ ಬಳಿಕ ಕುಟುಂಬಸ್ಥರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಮೂವರಿಗೆ ಸೋಂಕು ತಗಲಿರುವುದು ದೃಢವಾಗಿತ್ತು. ತನ್ನಿಂದಲೇ ಕುಟುಂಬಸ್ಥರಿಗೆ ಕೊರೋನ ಹಬ್ಬಿದೆ ಎಂಬ ಭಾವನೆಯಿಂದ ಮನನೊಂದ ಮಹಿಳೆ ಶುಕ್ರವಾರ ಮುಂಜಾನೆ ಕೋವಿಡ್ ವಾರ್ಡ್ ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನೆ ಸಂಬಂಧ ಮಲ್ಲೇಶ್ವರಂ ಠಾಣಾ ಪೊಲೀಸರು  ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆತ್ಮಹತ್ಯೆ ಒಳ್ಳೆಯ ಕ್ರಮವಲ್ಲ

ಕೊರೋನ ಸೋಂಕಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ. ಸರಕಾರ ಮತ್ತು ವೈದ್ಯರು ಸೇರಿದಂತೆ ಅನೇಕರು ಪ್ರಾಣ ರಕ್ಷಣೆಗೆ ಶ್ರಮವಹಿಸುತ್ತಿದ್ದಾರೆ. ಯಾರು ಸಹ ತಪ್ಪು ನಿರ್ಧರಗಳನ್ನು ಕೈಗೊಳ್ಳಬೇಡಿ.

-ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News