ಐದು ಸಾವಿರಕ್ಕೂ ಹೆಚ್ಚು ಹಾಸಿಗೆಗಳ ಕೋವಿಡ್‍ ಕೇರ್ ಸೆಂಟರ್ ಗಳ ಸ್ಥಾಪನೆಗೆ ಕ್ರಮ: ಡಾ.ಸುಧಾಕರ್

Update: 2020-06-26 17:26 GMT
Photo: Twitter

ಬೆಂಗಳೂರು, ಜೂ.26: ಹವಾಮಾನ ಬದಲಾವಣೆ ಹಾಗೂ ಇತರೆ ಕಾರಣಗಳಿಂದ ವಿಷಮಶೀತ ಜ್ವರ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು ಅವರಲ್ಲಿ ಬಹುತೇಕರಿಗೆ ಕೊರೋನ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಐದು ಸಾವಿರಕ್ಕೂ ಹೆಚ್ಚು ಹಾಸಿಗೆಗಳ ಕೋವಿಡ್‍ ಕೇರ್ ಸೆಂಟರ್ ಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಹಜ್ ಭವನ ಮತ್ತು ಖಾಸಗಿ ಆಶ್ರಮ ಆಸ್ಪತ್ರೆಯಲ್ಲಿ ಒಂದು ಸಾವಿರ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಮಹಾನಗರಪಾಲಿಕೆ ಆಯುಕ್ತರು 7,300 ಅಡಿ ವಿಸ್ತೀರ್ಣದ ಜಾಗಗಳನ್ನು ಗುರುತಿಸಿದ್ದಾರೆ. ಇದು ಆಷಾಡ ಮಾಸ ಆಗಿರುವುದರಿಂದ ಕಲ್ಯಾಣ ಮಂಟಪ ಹಾಗೂ ಇತರೆ ದೊಡ್ಡ ಕಟ್ಟಡಗಳನ್ನು ಗುರುತಿಸಿ ಸಿದ್ಧ ಮಾಡಿಕೊಳ್ಳಲು ವಿಡಿಯೋ ಸಂವಾದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್‍ ಕೇರ್ ಸೆಂಟರ್ ಗಳಲ್ಲಿ ವೈದ್ಯರ ಕೊರತೆ ನೀಗಿಸಿಕೊಳ್ಳಲು ಆಯುಷ್ ವೈದ್ಯರು, ಸರಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪಿಜಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕು. ಎಲ್ಲಿಯೂ ಗೊಂದಲಗಳಿಗೆ ಅವಕಾಶ ನೀಡದಂತೆ ಜಾಗ್ರತೆ ವಹಿಸಿ ಎಂದರು.

ಆರಂಭದಲ್ಲಿ ತಾವು ಜಾರಿಗೊಳಿಸಿದ್ದ ಪಾರದರ್ಶಕ ವ್ಯವಸ್ಥೆಯನ್ನೇ ಪುನಃ ಅಳವಡಿಸಿಕೊಂಡು ಮಾಧ್ಯಮಗಳಿಗೆ ಮಾಹಿತಿ ನೀಡಬೇಕು. ಅದು ತಪ್ಪಿದ್ದರಿಂದಲೇ ಮಾಹಿತಿ ಕೊರತೆಯಿಂದ ಮಾಧ್ಯಮಗಳಲ್ಲಿ ವಾಸ್ತವವಲ್ಲದ ವರದಿಗಳು ಬಿತ್ತರವಾಗುತ್ತವೆ. ಅಂತಹ ತಪ್ಪುಗಳಿಗೆ ಆಸ್ಪದ ನೀಡಬೇಡಿ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News