×
Ad

ಬೆಂಗಳೂರು: ಸಂಚಾರ ಪೊಲೀಸ್ ಕೇಂದ್ರ ಕಚೇರಿಯೂ ಸೀಲ್‍ಡೌನ್

Update: 2020-06-27 19:16 IST

ಬೆಂಗಳೂರು, ಜೂ.27: ಸಂಚಾರ ಪೊಲೀಸ್ ವಿಭಾಗದ ಸಿಬ್ಬಂದಿಯೋರ್ವರಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆ ಜೂ.30ರವರೆಗೂ ಸಂಚಾರ ಪೂರ್ವ ವಿಭಾಗದ ಕೇಂದ್ರ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ.

ಸಂಚಾರ ನಿರ್ವಹಣ ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಈ ಕಾರಣಕ್ಕಾಗಿ ಆರೋಗ್ಯಾಧಿಕಾರಿಗಳ ಸೂಚನೆಯಂತೆ ಜೂ.30ರವರೆಗೂ ಸೀಲ್‍ಡೌನ್ ಮಾಡಲಾಗಿದೆ. ಈ ಅವಧಿಯಲ್ಲಿ ಯಾವುದೇ ಕೆಲಸವನ್ನು ನಿರ್ವಹಿಸುವುದಿಲ್ಲ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News