ಬೆಂಗಳೂರು: ಕೊರೋನ ಗೆದ್ದ 100 ವರ್ಷದ ಮಹಿಳೆ

Update: 2020-06-27 16:41 GMT

ಬೆಂಗಳೂರು, ಜೂ.27: ನಗರದ 100 ವರ್ಷದ ವೃದ್ಧೆಯೊಬ್ಬರು ಕೊರೋನವನ್ನು ಗೆಲ್ಲುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ.

ನಗರದ ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿರುವ ನೂರು ವರ್ಷದ ವೃದ್ಧೆಗೆ ಜೂ.15ರಂದು ಕೊರೋನ ಸೋಂಕು ದೃಢಪಟ್ಟಿತ್ತು.

ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಗೆ ದಾಖಲಾಗಿ ಕೇವಲ 9 ದಿನಗಳಲ್ಲೇ ಕೊರೋನ ವಿರುದ್ಧ ಗೆದ್ದು ಬೀಗಿರುವ ಶತಾಯುಷಿ ವೃದ್ಧೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ.

ಇದೀಗ ಶತಾಯುಷಿಯೊಬ್ಬರು ಕೊರೋನದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದು ಹಿರಿಯ ಜೀವಿಗಳಲ್ಲಿ ತುಸು ನೆಮ್ಮದಿ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News