×
Ad

ಕೇಂದ್ರ ವಲಯ ಐಜಿಪಿಯಾಗಿ ಸೀಮಂತ್‍ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

Update: 2020-06-27 23:55 IST

ಬೆಂಗಳೂರು, ಜೂ.27: ಕೇಂದ್ರ ವಲಯ ಐಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಸೀಮಂತ್‍ಕುಮಾರ್ ಸಿಂಗ್ ಅವರು ಅಧಿಕಾರ ಸ್ವೀಕರಿಸಿದರು.

ಶನಿವಾರ ಹಿರಿಯ ಐಪಿಎಸ್ ಅಧಿಕಾರಿ ಐಜಿಪಿ ಶರತ್‍ ಚಂದ್ರ ಅವರು ಹೂಗುಚ್ಛ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಕೇಂದ್ರ ವಲಯ ಐಜಿಪಿ ಅವರ ವ್ಯಾಪ್ತಿಯಲ್ಲಿ ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಕೆಜಿಎಫ್, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಇದ್ದು, ಈ ಜಿಲ್ಲೆಗಳ ಎಸ್ಪಿಗಳ ಉಸ್ತುವಾರಿಯೂ ಐಜಿಪಿಯವರಿಗೆ ಸೇರಿದೆ.

ಈ ಸ್ಥಾನದಲ್ಲಿದ್ದ ಶರತ್‍ ಚಂದ್ರ ಅವರು ಕೇಂದ್ರಕಚೇರಿಯ ಆಡಳಿತ ವಿಭಾಗದ ಐಜಿಪಿಯಾಗಿ ವರ್ಗಾವಣೆಯಾಗಿದ್ದಾರೆ. ಮಂಗಳೂರು, ಬೆಳಗಾವಿ ಪೊಲೀಸ್ ಆಯುಕ್ತರು ಸೇರಿದಂತೆ 13 ಮಂದಿ ಐಪಿಎಸ್ ಅಧಿಕಾರಿಗಳನ್ನು ಸರಕಾರ ಶುಕ್ರವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News