ನಿಮ್ಮ ಐಫೋನ್ ನಲ್ಲಿ ‘ಟಿಕ್ ಟಾಕ್’ ಇದೆಯೇ ?: ಹಾಗಾದರೆ ಎಚ್ಚರ ಅಗತ್ಯ !

Update: 2020-06-28 16:35 GMT

ಹೊಸದಿಲ್ಲಿ, ಜೂ.28: ಐಫೋನ್‌ಗೆ ಬಳಸುವ ಐಒಎಸ್ 14 ಸಾಫ್ಟ್‌ವೇರ್‌ನ ಪ್ರಾಯೋಗಿಕ ಆವೃತ್ತಿ ಬಳಸುವವರು ತಮ್ಮ ಐಪೋನ್‌ನಲ್ಲಿ ಟೈಪ್ ಮಾಡುವ ಸಂದೇಶಗಳನ್ನು ಟಿಕ್‌ಟಾಕ್ ದಾಖಲು ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

ಪಾಸ್‌ವರ್ಡ್, ಅಥವಾ ಇತರ ರಹಸ್ಯ ವಿಷಯಗಳ ಮೇಲೆ ಟಿಕ್‌ಟಾಕ್ ಬೇಹುಗಾರಿಕೆ ನಡೆಸುತ್ತಿರುವ ಬಗ್ಗೆ ‘ಫೋರ್ಬ್ಸ್’ನ ಲೇಖನದಲ್ಲಿ ತಿಳಿಸಲಾಗಿದೆ. ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಐಫೋನ್ ಬಳಕೆದಾರರ ಮೇಲೆ ಇದು ಪರಿಣಾಮ ಬೀರಲಿದೆ. ಈ ಬಗ್ಗೆ ಆರೋಪ ಕೇಳಿ ಬಂದಾಗ, ಎಪ್ರಿಲ್‌ನಲ್ಲಿ ಇಂತಹ ಚಟುವಟಿಕೆ ಕೊನೆಗೊಳ್ಳಲಿದೆ ಎಂದು ಟಿಕ್‌ಟಾಕ್ ಭರವಸೆ ನೀಡಿದ್ದರೂ ಇದು ಮುಂದುವರಿದಿದೆ ಎಂದು ಲೇಖನದಲ್ಲಿ ತಿಳಿಸಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಐಒಎಸ್14 ಆವೃತ್ತಿ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

  ಈ ಸಮಸ್ಯೆಯ ಮೂಲ ಐಒಎಸ್‌ನ ಕ್ಲಿಪ್‌ಬೋರ್ಡ್ ಕಾರ್ಯನಿರ್ವಹಣೆಯಲ್ಲಿದೆ. ಬಳಕೆದಾರನ ಟೆಕ್ಟ್ಸ್ ಸಂದೇಶ ಅಥವಾ ರೂಪಕ (ಚಿತ್ರ) ಸಂದೇಶವನ್ನು ಮತ್ತೊಂದು ಆ್ಯಪ್‌ನಲ್ಲಿ ಕಾಪಿ ಪೇಸ್ಟ್ ಮಾಡಲು ಈ ಕ್ಲಿಪ್‌ಬೋರ್ಡ್ ನೆರವಾಗುತ್ತದೆ. ಆದರೆ ಇಲ್ಲಿ, ಈ ಸಂದೇಶವನ್ನು ಒಂದು ಆ್ಯಪಲ್ ಉತ್ಪನ್ನದಿಂದ ಮತ್ತೊಂದು ಆ್ಯಪಲ್ ಉತ್ಪನ್ನಕ್ಕೂ ಕಾಪಿ ಪೇಸ್ಟ್ ಮಾಡಬಹುದು(ಆ್ಯಪಲ್ ಫೋನ್(ಐಪೋನ್)ನಿಂದ ಐಪ್ಯಾಡ್ ಅಥವಾ ಮ್ಯಾಕ್(ಮೀಡಿಯಾ ಎಕ್ಸೆಸ್ ಕಂಟ್ರೋಲ್) ವ್ಯವಸ್ಥೆಗೆ ಪೇಸ್ಟ್ ಮಾಡಬಹುದು.

  ಆ್ಯಪಲ್ ಸಾಫ್ಟ್‌ವೇರ್‌ ನ ವಿನ್ಯಾಸದಿಂದಾಗಿ ಐಫೋನ್ ಬಳಕೆದಾರನ ಎಲ್ಲಾ ಸಂದೇಶಗಳನ್ನೂ ಕಾಪಿ ಪೇಸ್ಟ್ ಮಾಡಿಕೊಳ್ಳಬಹುದು. ಹೀಗೆ ರೆಕಾರ್ಡ್ ಮಾಡುತ್ತಿರುವ ಬಗ್ಗೆ ಸಂಬಂಧಿತ ಆ್ಯಪ್‌ನಲ್ಲಿ ಯಾವುದೇ ಎಚ್ಚರಿಕೆ ಅಥವಾ ಸೂಚನೆ ಕೂಡಾ ನೀಡುವುದಿಲ್ಲ. ಬಳಕೆದಾರ ಇರುವ ಸ್ಥಳವನ್ನೂ ಇದರಿಂದ ಪತ್ತೆಹಚ್ಚಬಹುದು. ಒಂದು ಐಫೋನ್‌ನಲ್ಲಿ ಟಿಕ್‌ಟಾಕ್ ಸಕ್ರಿಯವಾಗಿದ್ದರೆ, ಆಗ ಆ ಫೋನ್‌ನಲ್ಲಿರುವ ಪಾಸ್‌ವರ್ಡ್, ಕೆಲಸದ ದಾಖಲೆ, ಹಣಕಾಸಿನ ವ್ಯವಹಾರದ ದಾಖಲೆ, ರಹಸ್ಯದ ಇಮೇಲ್‌ಗಳನ್ನು ಟಿಕ್‌ಟಾಕ್ ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ಲೇಖನದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News