ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಕೋವಿಡ್‍ ಕೇರ್ ಸೆಂಟರ್ ಸ್ಥಾಪನೆ

Update: 2020-06-28 17:51 GMT

ಬೆಂಗಳೂರು, ಜೂ.28: ನಗರದಲ್ಲಿ ಮಹಾಮಾರಿ ಕೊರೋನ ಸೋಂಕು ಅತಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ 300 ಹಾಸಿಗೆಗಳುಳ್ಳ ಕೋವಿಡ್‍ ಕೇರ್ ಸೆಂಟರನ್ನು ಸ್ಥಾಪಿಸಲಾಗಿದೆ.

ಒಳಾಂಗಣ ಕ್ರೀಡಾಂಗಣದಲ್ಲಿ 300 ಹಾಸಿಗೆಗಳ ವ್ಯವಸ್ಥೆ ಮಾಡಲು ಮಂಚ, ಹಾಸಿಗೆ ಇನ್ನಿತರ ಸೌಲಭ್ಯಗಳನ್ನು ಒದಗಿಸಿ, ಅತಿ ವೇಗದಲ್ಲಿ ಕೆಲಸ ನಡೆಯುತ್ತಿದ್ದು, ಸಂಜೆ ಅಥವಾ ನಾಳೆಯೊಳಗೆ 300 ಹಾಸಿಗೆಗಳುಳ್ಳ ಕೋವಿಡ್‍ ಕೇರ್ ಸೆಂಟರ್ ಸೇವೆ ದೊರೆಯಲಿದೆ.

ಒಳಾಂಗಣ ಕ್ರೀಡಾಂಗಣದಲ್ಲಿ ಮುಂಜಾನೆಯಿಂದಲೇ ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಕೊರೋನ ಸೋಂಕಿತರಿಗೆ ಅಗತ್ಯ ಇರುವ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಆಧುನಿಕ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಜತೆಗೆ ನಗರದ ವಿವಿಧೆಡೆ ಸೋಂಕಿರ ಚಿಕಿತ್ಸೆಗಾಗಿ 10 ಸಾವಿರ ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ. ನಗರದಲ್ಲಿ ಒಂದು ವಾರದಿಂದ ಕೊರೋನ ಸೋಂಕಿತರ ಸಂಖ್ಯೆ ಶೇ. 30 ರಿಂದ ಶೇ. 50ರ ವರೆಗೆರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.

ಹೀಗಾಗಿ ಸೋಂಕಿತರ ಲಕ್ಷಣ ಆಧರಿಸಿ ಲಘು, ಮಧ್ಯಮ ಹಾಗೂ ತೀವ್ರ ಸ್ವರೂಪ ಎಂದು ವಿಂಗಡಿಸಿ ಚಿಕಿತ್ಸೆ ಕೊಡಲು ನಿರ್ಧರಿಸಲಾಗಿದೆ. ವೆಂಟಿಲೇಟರ್ ಹೈಫ್ಲೂ ಆಕ್ಸಿಜನ್ ಹಾಗೂ ಇತರೆ ಅಗತ್ಯ ಸೌಲಭ್ಯಗಳಿರುವ ಕಡೆ ಕೊರೋನ ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಸೋಂಕು ತಗುಲಿರುವುದು ಕಂಡುಬಂದ 3 ರಿಂದ 6 ಗಂಟೆಯೊಳಗೆ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡ 50ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಬಿಟ್ಟುಕೊಡಲು ರಾಜ್ಯ ಸರಕಾರ ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News