ಕೊರೋನ ತಡೆಗಟ್ಟುವಲ್ಲಿ ಬಿಬಿಎಂಪಿ ವಿಫಲ: ವಿಪಕ್ಷ ಆರೋಪ

Update: 2020-06-30 17:03 GMT

ಬೆಂಗಳೂರು, ಜೂ.30: ನಗರದಲ್ಲಿ ಕೊರೋನ ತಡೆಗಟ್ಟುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಎಂದು ವಿಪಕ್ಷ ನಾಯಕರು ಕೌನ್ಸಿಲ್ ಆರೋಪಿಸಿದರೆ, ಸೋಂಕು ನಿಯಂತ್ರಿಸುವುದಾಗಿ ಮೇಯರ್ ಭರವಸೆ ನೀಡಿದರು.

ಮಂಗಳವಾರ ನಡೆಸ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಕೊರೋನ ತಡೆಗಟ್ಟಲು ಬಿಬಿಎಂಪಿ ವಿಫಲವಾಗಿದೆ ಎಂಬ ಪ್ರತಿಪಕ್ಷ ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಸೋಂಕು ತಡೆಗಟ್ಟಲು ರಾಜ್ಯ ಸರಕಾರ ಬಿಬಿಎಂಪಿಗೆ 45 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಣವನ್ನು ಸೂಕ್ತವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ನಮ್ಮ ರಾಜ್ಯ ಹಾಗೂ ಬೆಂಗಳೂರು ನಗರ, ಇತರ ಜಿಲ್ಲೆಗಳಿಗೆ ಹೋಲಿಸಿ ಕೊಂಡರೆ ಉತ್ತಮವಾಗಿದೆ. ಅತಿ ಕಡಿಮೆ ಸೋಂಕು ಕಂಡುಬರುತ್ತಿದೆ. ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ 14 ದಿನಗಳಲ್ಲೇ ಗುಣಮುಖರಾಗುತ್ತಿರುವುದು ಕಂಡುಬರುತ್ತಿದೆ ಎಂದು ಸಭೆಗೆ ತಿಳಿಸಿದರು.

ನಗರದಲ್ಲಿ ಅಂಬ್ಯುಲೆನ್ಸ್ ಸಮಸ್ಯೆ ಇಲ್ಲ. ಕೋರ್ ಏರಿಯಾಗಳಲ್ಲಿ 10 ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. 100 ಬೆಡ್‍ಗಳಿಗಿಂತ ಹೆಚ್ಚಿರುವ ಆಸ್ಪತ್ರೆಗಳನ್ನು ವ್ಯವಸ್ಥೆ ಮಾಡಿಕೊಳ್ಳ ಲಾಗಿದೆ. ಹಲವು ಕ್ರೀಡಾಂಗಣ, ಕಲ್ಯಾಣ ಮಂಟಪ, ಹಾಸ್ಟೆಲ್, ಹೊಟೇಲ್‍ಗಳಲ್ಲಿ ಸೋಂಕಿತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. 22 ಕೋವಿಡ್ ಸೆಂಟರ್‍ಗಳಿದ್ದು, 16 ಸಾವಿರ ಬೆಡ್ ವ್ಯವಸ್ಥೆ ಇದೆ. ಇಸ್ಕಾನ್ ಸಂಸ್ಥೆಯಿಂದ ಸೋಂಕಿತರಿಗೆ ಆಹಾರ ಸರಬರಾಜು ಮಾಡಲಾಗುತ್ತಿದೆ ಎಂದರು.

ಕೆಲವು ಕಡೆ ಬೆಡ್‍ಗಳ ಸಮಸ್ಯೆಯಿದ್ದು ಕಂದಾಯ ಸಚಿವ ಆರ್.ಅಶೋಕ್ ಅವರ ನೇತೃತ್ವದಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಹೆಲ್ಪ್ ಡೆಸ್ಕ್ ಕಡ್ಡಾಯ
ಸೋಂಕು ಬಂದಾಗ ಸದಸ್ಯರಿಗೆ ಮೊದಲ ಕರೆ ಬರಲಿದೆ. ಯಾವ ಅಧಿಕಾರಿಗಳು ನೋಡಲ್ ಅಧಿಕಾರಿ ಆಗಿರುತ್ತಾರೆ ಅವರ ದೂರವಾಣಿ ಸಂಪರ್ಕವನ್ನು 198 ಸದಸ್ಯರಿಗೆ ನೀಡಬೇಕು. ಎಲ್ಲಾ ಕೆಲಸ ವಲಯ ಜೆಸಿಗಳೇ ಮಾಡಲು ಸಾಧ್ಯವಿಲ್ಲ. ಎಲ್ಲಾ ವಲಯಗಳಲ್ಲಿ ಹೆಲ್ಪ್ ಡೆಸ್ಕ್ ಕಡ್ಡಾಯವಾಗಿ ಮಾಡಬೇಕು ಎಂದು ಮೇಯರ್ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News