ಬೆಂಗಳೂರು: ಪೊಲೀಸರಿಗೆ ಕೊರೋನ ತಪಾಸಣೆ ನಿರಾಕರಣೆ ಆರೋಪ; ವಾಗ್ವಾದ

Update: 2020-06-30 17:05 GMT

ಬೆಂಗಳೂರು, ಜೂ.30: ಇಲ್ಲಿನ ಯಲಹಂಕ ಸರಕಾರಿ ಆಸ್ಪತ್ರೆಯಲ್ಲಿ ಪೊಲೀಸರಿಗೆ ಕೊರೋನ ಪರೀಕ್ಷೆ ಮಾಡಲು ನಿರಾಕರಿಸಲಾಗಿದೆ ಎಂದು ಆರೋಪಿಸಿ ಪೊಲೀಸರು ಹಾಗೂ ಆಸ್ಪತ್ರೆ ಸಿಬ್ಬಂದಿ ನಡುವೆ ವಾಗ್ವಾದ ಜರುಗಿತು.

ಮಂಳವಾರ ಮುಂಜಾನೆ ಇಲ್ಲಿನ ಈಶಾನ್ಯ ವಿಭಾಗದ ಪೊಲೀಸರು, ಕೋವಿಡ್-19 ಪರೀಕ್ಷೆಗಾಗಿ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಪರೀಕ್ಷೆ ಪ್ರಕ್ರಿಯೆ ಜರುಗಲು ಸಾಧ್ಯವಿಲ್ಲವೆಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ ಎನ್ನಲಾಗಿದ್ದು, ಈ ವಿಚಾರವಾಗಿ ಪೊಲೀಸರು ಮತ್ತು ಆಸ್ಪತ್ರೆ ಸಿಬ್ಬಂದಿ ಮಧ್ಯೆ ಮಾತಿನ ಚಕುಮಕಿ ನಡೆಯಿತು.

ಸೋಮವಾರ ಸಹ ತಪಾಸಣೆ ಪ್ರಕ್ರಿಯೆ ನಡೆಸಿದಾಗ ಮಂಗಳವಾರವೂ ಪರೀಕ್ಷೆಗೆ ಹಾಜರಾಗುವಂತೆ ತಿಳಿಸಿದ್ದರು. ಇದೀಗ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News