ಬೆಂಗಳೂರು: ಹಾಸ್ಟೆಲ್ ಖಾಲಿ ಮಾಡಲು ಸೂಚನೆ; ವಿದ್ಯಾರ್ಥಿನಿಯರು ಕಂಗಾಲು

Update: 2020-06-30 17:13 GMT

ಬೆಂಗಳೂರು, ಜೂ.30: ಬೆಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿಯರ ಹಾಸ್ಟೆಲ್ ಅನ್ನು ಕೊರೋನ ಆಸ್ಪತ್ರೆ ಮಾಡಲು ಸರಕಾರ ದಿಢೀರ್ ನಿರ್ಧಾರ ಕೈಗೊಂಡ ಹಿನ್ನೆಲೆ ವಿದ್ಯಾರ್ಥಿನಿಯರು ಕಂಗಾಲಾಗಿದ್ದಾರೆ.

ಕೊರೋನ ಸೋಂಕು ಬಗ್ಗೆ ಮುಂಜಾಗ್ರತೆ ವಹಿಸದೇ ಈಗ ಇದ್ದಕ್ಕಿದ್ದಂತೆ 550 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಖಾಲಿ ಮಾಡುವಂತೆ ಸರಕಾರ ಸೂಚನೆ ನೀಡಿದ್ದರಿಂದ ಊರಿಗೆ ತೆರಳಿದ್ದ ವಿದ್ಯಾರ್ಥಿನಿಯರು ತಮ್ಮ ಲಗೇಜ್, ಲ್ಯಾಪ್ ಟಾಪ್, ಮಾಕ್ರ್ಸ್ ಕಾರ್ಡ್ ಸೇರಿದಂತೆ ಹಲವು ವಸ್ತುಗಳು ವಸತಿ ನಿಲಯದಲ್ಲಿವೆ. ನಮಗೆ ಮೊದಲೇ ತಿಳಿಸದೇ ಈ ರೀತಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಕೊರೋನ ಭೀತಿ ಹಿನ್ನೆಲೆ ಎಲ್ಲರೂ ಊರಿನಲ್ಲಿದ್ದಾರೆ. ಈಗ ದಿಢೀರ್ ಆಗಿ ಹೇಳಿದರೆ ಹಾಸ್ಟೆಲ್‍ನಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗೋದು ಹೇಗೆ, ಸರಕಾರಕ್ಕೆ ಬೇರೆ ಸ್ಥಳ ಇಲ್ಲವೇ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಜ್ಞಾನಭಾರತಿ ಆವರಣದಲ್ಲಿರುವ ಎಸ್.ಸಿ/ಸ್.ಟಿ ಹಾಸ್ಟೆಲ್ ಖಾಲಿ ಮಾಡಿಸಲಾಗುತ್ತಿದೆ. ಸದ್ಯ ಹಾಸ್ಟೆಲ್‍ನಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿನಿಯರು ಇದ್ದಕ್ಕಿದ್ದಂತೆ ಖಾಲಿ ಮಾಡಿ ಎಲ್ಲಿಗೆ ಹೋಗಬೇಕು ಎಂಬ ಆತಂಕದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News