ಕ್ಷುಲ್ಲಕ ಕಾರಣಕ್ಕೆ ಠಾಣೆ ಮೆಟ್ಟಿಲೇರಬೇಡಿ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

Update: 2020-07-01 14:11 GMT

ಬೆಂಗಳೂರು, ಜು.1: ಕೋವಿಡ್-19 ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಸಾರ್ವಜನಿಕರು ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಠಾಣೆಗಳ ಮೆಟ್ಟಿಲೇರಬೇಡಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಬುಧವಾರ ತಮ್ಮ ಫೇಸ್‍ಬುಕ್ ಪುಟದ ಮೂಲಕ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನಲ್ಲಿಯೇ 1.5 ಕೋಟಿ ಜನ ಸಂಖ್ಯೆ ಇದ್ದು, ನಗರ ವ್ಯಾಪ್ತಿಯಲ್ಲಿ ಸುಮಾರು 20 ಸಾವಿರ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಸುರಕ್ಷತಾ ನಿಯಯ ಪಾಲನೆ ಸಾರ್ವಜನಿಕರ ಕರ್ತವ್ಯವಾಗಿದ್ದು, ದಯವಿಟ್ಟು ಕ್ಷುಲ್ಲಕ ಕಾರಣಕ್ಕೆ ಠಾಣೆ ಮೆಟ್ಟಿಲೇರಬೇಡಿ ಎಂದು ಮನವಿ ಮಾಡಿದರು.

ಪೊಲೀಸರಲ್ಲಿ ಕೊರೋನ ಲಕ್ಷಣ ಹೆಚ್ಚಾಗಿ ಬೆಳಕಿಗೆ ಬರುತ್ತಿರುವ ಕಾರಣ, ನಗರದಲ್ಲಿ ಇತರೆ ಪ್ರಕರಣಗಳ ಕಡೆಗೆ ಗಮನ ನೀಡಲು ಆಗುತ್ತಿಲ್ಲ. ಎಲ್ಲವೂ ಸರಿಯಾದ ನಂತರ ಆ ಕಡೆ ಗಮನ ಹರಿಸುತ್ತೇವೆ ಎಂದ ಅವರು, ಲಾಕ್ ಡೌನ್ ಅವಧಿಯಲ್ಲಿ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಐವರು ಸಿಬ್ಬಂದಿ ಕೋವಿಡ್-19ಗೆ ಬಲಿಯಾಗಿದ್ದಾರೆ. ಅಲ್ಲದೆ, ಸರಕಾರ ಮತ್ತು ಪೊಲೀಸ್ ಇಲಾಖೆ ಮೃತ ಸಿಬ್ಬಂದಿ ಕುಟುಂಬದವರ ಜೊತೆಗಿದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News