ಬೆಂಗಳೂರು : ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿ ವತಿಯಿಂದ ಮೊದಲ ಚಾರ್ಟೆಡ್ ವಿಮಾನ

Update: 2020-07-01 17:12 GMT

ದುಬೈ: ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿಯು ಯುಎಇಯಲ್ಲಿ ಸಂಕಷ್ಟದಲ್ಲಿರುವವರಿಗಾಗಿ ಚಾರ್ಟರ್ಡ್ ವಿಮಾನದ ವ್ಯವಸ್ಥೆ  ಮಾಡಿ ಇಂದು ತಾಯಿನಾಡಿಗೆ ಕಳುಹಿಸಿದೆ.

ದುಬೈ, ಅಬುಧಾಬಿ ಮತ್ತು ಶಾರ್ಜಾ ದಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡವರನ್ನು ರಾಸ್ ಅಲ್ ಖೈಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ ಐದು ಘಂಟೆಗೆ ಹೊರಟು ರಾತ್ರಿ ಹತ್ತು ಗಂಟೆ ಸುಮಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ಯುಎಇಯಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರಿಗಾಗಿ ಒಂದು ತಿಂಗಳ ಆಹಾರದ ಕಿಟ್ಟ್, ಮೆಡಿಕಲ್ ಕಿಟ್ಟ್ ಮತ್ತು ವಿಮಾನದ ಟಿಕೆಟ್ ಸೇರಿದಂತೆ ಕೋವಿಡ್ ಕಾಲದಲ್ಲಿ ಧಾನಿಗಳ ಸಹಾಯದಿಂದ ಹಲವು ಸಾಂತ್ವನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಮುಂದಿನ ದಿನಗಳಲ್ಲಿ ಇನ್ನಷ್ಟು ಖಾಸಗಿ ಚಾರ್ಟೆಡ್ ವಿಮಾನವು ಬೆಂಗಳೂರು ಮತ್ತು ಮಂಗಳೂರು ತಲಪಲಿದೆ ಎಂದು ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೆಗ, ಉಪಾಧ್ಯಕ್ಷರಾದ ಶರೀಫ್ ಕಾವು ಮತ್ತು ವಿಖಾಯ ಚಯರ್ ಮೇನ್ ನವಾಝ್ ಬಿ ಸಿ ರೋಡ್ ಅವರು ಪ್ರಯಾಣಿಕರ ಬೀಳ್ಕೊಡುಗೆ  ಸಂದರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

ರಾಸಲ್ ಖೈಮಾ ಮೂಲದ ಸ್ಪೈಸ್ ಜೆಟ್ ಸಂಸ್ಥೆಯ ವಿಮಾನದಲ್ಲಿ 168 ಅನಿವಾಸಿ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಹೊತ್ತು ಹೊರಟ ವಿಮಾನದಲ್ಲಿ  ಆದ್ಯತೆಯ ಮೇರೆಗೆ ಗರ್ಭಿಣಿಯರಿಗೆ, ತುರ್ತು ಚಿಕಿತ್ಸಾ ರೋಗಿಗಳಿಗೆ, ಹಿರಿಯ ನಾಗರಿಕರಿಗೆ, ವಿಸಿಟ್ ವೀಸಾದಲ್ಲಿ ಬಂದು ಸಿಲುಕಿಕೊಂಡವರಿಗೆ, ಕೆಲಸ ಕಳೆದುಕೊಂಡವರಿಗೆ ಅವಕಾಶ ಕಲ್ಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News