ನೈಟ್‍ಕರ್ಫ್ಯೂ, ಲಾಕ್‍ಡೌನ್‍ನಿಂದ ಹೋಟೆಲ್ ಉದ್ಯಮಕ್ಕೆ ಮತ್ತೆ ಸಂಕಷ್ಟ

Update: 2020-07-01 17:15 GMT

ಬೆಂಗಳೂರು, ಜು.1: ಕೋವಿಡ್ ನಿಯಂತ್ರಿಸುವ ಉದ್ದೇಶದಿಂದ ಸರಕಾರ ಘೋಷಿಸಿರುವ ರಾತ್ರಿ ಕಫ್ರ್ಯೂನಿಂದಾಗಿ ಹೋಟೆಲ್ ಉದ್ಯಮಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಈಗಾಗಲೇ ಎಲ್ಲೆಡೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ಮತ್ತೊಂದು ಸುತ್ತಿನ ಲಾಕ್‍ಡೌನ್ ಭೀತಿ ಎದುರಾಗಿದೆ.

ಹೋಟೆಲ್‍ಗಳು ನಷ್ಟದಲ್ಲಿ ನಡೆಯುತ್ತಿರುವುದರಿಂದ ಈಗಾಗಲೇ ಕೆಲವು ಹೋಟೆಲ್‍ಗಳು ಸೆಲ್ಫ್ ಸರ್ವೀಸ್ ನಿಲ್ಲಿಸಿ, ಪಾರ್ಸೆಲ್ ಸೇವೆಗಷ್ಟೇ ಸೀಮಿತಗೊಳಿಸಿವೆ. ಗಾಂಧಿಬಜಾರ್‍ನಲ್ಲಿರುವ ವಿದ್ಯಾರ್ಥಿ ಭವನ್ ಈಗಾಗಲೇ ಹಲವು ದಿನಗಳಿಂದ ಸೆಲ್ಫ್ ಸರ್ವೀಸ್ ಮಾತ್ರ ನೀಡುತ್ತಿದೆ.
ಕೊರೋನ ಸೋಂಕಿತರು ಹೆಚ್ಚಾದ ಹಿನ್ನೆಲೆಯಲ್ಲಿ ಜುಲೈನಲ್ಲಿ ಮತ್ತೊಂದು ಸುತ್ತಿನ ಲಾಕ್‍ಡೌನ್ ಆರಂಭವಾಗುವ ಸಂಭವ ಇದೆ. ಹೀಗಾಗಿ ಮತ್ತೆ ಹೋಟೆಲ್‍ನವರು ಸೆಲ್ಫ್ ಸರ್ವೀಸ್ ಬಂದ್ ಮಾಡಿ ಬರಿ ಪಾರ್ಸೆಲ್ ಸೇವೆಯನ್ನು ಮಾತ್ರ ಮಾಡಲು ನಿರ್ಧರಿಸಿದ್ದಾರೆ. ಜತೆಗೆ ಬಸವನಗುಡಿ ಟ್ರೇಡರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಡಿವಿಜಿ ರಸ್ತೆಯಲ್ಲಿ  ಕೆಲವು ಹೋಟೆಲ್‍ಗಳು ಬಂದ್ ಆಗಿದ್ದು, ಒಂದು ವಾರ ಕಾಲ ತೆರೆಯದಿರಲು ನಿರ್ಧರಿಸಿವೆ.

ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಅಲ್ಲದೆ ಬಂದರೂ ಅವರನ್ನು ಸುರಕ್ಷಿತ ಅಂತರದಡಿ ನಿರ್ವಹಣೆ ಮಾಡುವುದು ಕಷ್ಟ. ನಮಗೂ ಲಾಭವಿಲ್ಲ. ಹೀಗಾಗಿ ಸೆಲ್ಫ್ ಸರ್ವೀಸ್ ತೆಗೆದು ಪಾರ್ಸೆಲ್ ಸೇವೆ ಮಾತ್ರ ಕಲ್ಪಿಸುತ್ತಿದ್ದೇವೆ ಎಂದು ವಿದ್ಯಾರ್ಥಿ ಭವನನ ಮ್ಯಾನೇಜಿಂಗ್ ಪಾರ್ಟನರ್ ಅರುಣ್‍ಕುಮಾರ್ ಅಡಿಗ ಹೇಳಿದ್ದಾರೆ.

ಅಗತ್ಯ ಸೇವೆಗಳಲ್ಲಿ ಹೋಟೆಲ್ ಕೂಡ ಒಂದು. ಇದನ್ನು ಮುಚ್ಚುವಂತೆ ಒತ್ತಡ ಹೇರುವಂತಿಲ್ಲ. ಆದರೆ ನೈಟ್ ಕಫ್ರ್ಯೂ ಇದೆಯೆಂದು ರಾತ್ರಿ 8 ಕ್ಕೆ ಬಂದ್ ಮಾಡುವಂತೆ ಪೊಲೀಸರಿಂದ ಒತ್ತಡ ಬರುತ್ತಿದೆ. ಇದನ್ನ ಜಾರಿ ಮಾಡದಂತೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ.
ರಾತ್ರಿ 8 ಊಟದ ಸಮಯ. ಹೀಗಾಗಿ ಕೊನೆ ಪಕ್ಷರಾತ್ರಿ 10 ರವರೆಗೆ ಪಾರ್ಸೆಲ್ ಸೇವೆಗಾದರೂ ಅವಕಾಶ ನೀಡುವಂತೆ ಕೋರಲಾಗಿದೆ ಎಂದು ಬೆಂಗಳೂರು ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಮಾಹಿತಿ ನೀಡಿದ್ದಾರೆ.

ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ನೈಟ್ ಕಫ್ರ್ಯೂ ವಿಧಿಸುವುದು ಒಳಿತು. ಆದರೆ ಲಾಕ್‍ಡೌನ್ ಜಾರಿಯಾದರೆ ಪಾರ್ಸೆಲ್ ಮಾತ್ರ ಕೊಡುವುದು ಅನಿವಾರ್ಯ. ಹಾಗೆಯೇ ನೈಟ್ ಕಫ್ರ್ಯೂ ಇದ್ದಾಗ ಹೋಟೆಲ್‍ಗಳನ್ನು ಬಂದ್ ಮಾಡಬೇಕಾಗುತ್ತದೆ ಎನ್ನುತ್ತಾರೆ ರಾಜ್ಯ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News