ಬೆಂಗಳೂರು: ಕೆಪಿಸಿಎಲ್‍ನಲ್ಲಿ 2400 ಕೋಟಿ ರೂ.ಹಗರಣ; ಆರೋಪ

Update: 2020-07-01 18:52 GMT

ಬೆಂಗಳೂರು, ಜು.1: ರಾಜ್ಯ ವ್ಯಾಪ್ತಿಯ ಮೂರು ಉಷ್ಣ ವಿದ್ಯುತ್ ಕೇಂದ್ರಗಳಿಗೆ ವಿದ್ಯುತ್ ಯೋಜನೆಗಾಗಿ ಆಹ್ವಾನಿಸಿರುವ ಟೆಂಡರ್‍ನಲ್ಲಿ ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿಎಲ್) 2400 ಕೋಟಿ ಹಗರಣ ನಡೆಸಿದ್ದು, ಈ ಸಂಬಂಧ ಸಿಐಡಿ ತನಿಖೆ ನಡೆಸಬೇಕೆಂದು ಭೀಮಪುತ್ರಿ ಬ್ರಿಗೇಡ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ರೇವತಿ ರಾಜ್ ಆಗ್ರಹಿಸಿದರು.

ಬುಧವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಳ್ಳಾರಿ, ರಾಯಚೂರು, ಯರಾಮರಸ್ ಉಷ್ಣ ವಿದ್ಯುತ್ ಕೇಂದ್ರಗಳಿಗೆ ವಿದ್ಯುತ್ ಯೋಜನೆ ಪ್ರಾರಂಭಿಸಲು ಆಹ್ವಾನಿಸಿರುವ ಟೆಂಡರ್ ಮೊತ್ತ 2400 ಕೋಟಿ ರೂ. ಆಗಿದೆ. ಆದರೆ ಈ ಯೋಜನೆಯ ಟೆಂಡರ್ ಅನ್ನು ವಿದ್ಯುತ್ ವಲಯದಲ್ಲಿ, ತಾಂತ್ರಿಕವಾಗಿ ಅನುಭವವಿಲ್ಲದ ಉದ್ಯಮಿ ಶಾಪೂರ್ಜಿ ಪಾಲ್ಲೊಂಜಿ ಅವರಿಗೆ ಮಂಜೂರು ಮಾಡಲಾಗಿದೆ ಎಂದು ದೂರಿದರು.

ಅಲ್ಲದೆ, ವಿದ್ಯುತ್ ಕ್ಷೇತ್ರದಲ್ಲಿರುವ ಬಿಎಚ್‍ಇಎಲ್, ಬ್ರಿಡ್ಜ್ ಆಂಡ್ ರೂಫ್ ಸಂಸ್ಥೆಗಳಿಗೆ ಟೆಂಡರ್ ನಿರಾಕರಿಸಿಲಾಗಿದೆ. ಈ ಮೂಲಕ ಕೆಪಿಸಿಎಲ್ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪೆÇನ್ನುರಾಜ್ ಅವರೂ ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. 

ಯೋಜನೆಯು 2022ರೊಳಗೆ ಪೂರ್ಣಗೊಳ್ಳಬೇಕು ಇಲ್ಲವಾದರೆ ಉಷ್ಣ ವಿದ್ಯುತ್ ಕೇಂದ್ರಗಳು ಸ್ಥಗಿತಗೊಳಿಸುವಂತೆ ಭಾರತ ಸರಕಾರದ ಪರಿಸರ ಮತ್ತು ಅರಣ್ಯ ಇಲಾಖೆಯು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಈ ಹಿನ್ನಲೆಯಲ್ಲಿ ತರಾತುರಿಯಲ್ಲಿ ಟೆಂಡರ್ ಕರೆದು ಅನುಭವ ರಹಿತ ಉದ್ಯಮಿಗೆ ನೀಡಿದೆ. ಇನ್ನೊಂದೆಡೆ ಅಗತ್ಯ ಪ್ರಮಾಣದ ವಿದ್ಯುತ್ ಉತ್ಪಾದನಾ ಸಾಮಥ್ರ್ಯವಿದ್ದರೂ ಖಾಸಗಿಯವರಿಂದ ವಿದ್ಯುತ್ ಖರೀದಿಸಲಾಗುತ್ತಿದೆ. ಇದರಿಂದ ರಾಜ್ಯ ಸರಕಾರಕ್ಕೆ ಅಪಾರ ನಷ್ಟ ಉಂಟಾಗುತ್ತಿದೆ ಎಂದು ಮಾಹಿತಿ ನೀಡಿದರು. 

ವಿದ್ಯುತ್ ಖರೀದಿ ಬಗ್ಗೆ ಪೊನ್ನುರಾಜ್ ಅವರು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಈ ಹಿನ್ನಲೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಎಸಿಬಿ ಮೊದಲಾದ ಸಂಸ್ಥೆಗಳಿಗೆ ದೂರು ನೀಡಲಾಗಿದೆ. ಟೆಂಡರ್‍ಗೆ ಅನುಮತಿ ನೀಡಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಖಾಸಗಿ ಉದ್ಯಮಿಗೆ ನೀಡಿರುವ ಕುರಿತು ಪೊನ್ನುರಾಜ್ ಅವರು ಸ್ಪಷ್ಟ ಉತ್ತರ ನೀಡಬೇಕು. ಟೆಂಡರ್ ಅನ್ನು ಕೂಡಲೇ ರದ್ದುಗೊಳಿಸಿ ಭ್ರಷ್ಟಾಚಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News