ನಟ ಮಿಮಿಕ್ರಿ ರಾಜಗೋಪಾಲ್ ನಿಧನ

Update: 2020-07-02 06:55 GMT

ಬೆಂಗಳೂರು, ಜು.2: ಸುಮಾರು 650ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳಿಗೆ ಹಾಸ್ಯದೂಟ ಬಡಿಸಿದ್ದ ನಟ ಮಿಮಿಕ್ರಿ ರಾಜಗೋಪಾಲ್ ಗುರುವಾರ ನಿಧನರಾಗಿದ್ದಾರೆ.ಅವರಿಗೆ 69 ವರ್ಷ ವಯಸ್ಸಾಗಿತ್ತು.

ಕಿಡ್ನಿ ಹಾಗೂ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕೆಂಗೇರಿಯಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಕನ್ನಡ ಹಾಗೂ ಇತರೆ ಭಾಷೆಗಳಲ್ಲಿ ಹಾಸ್ಯನಟ ಹಾಗೂ ಪೋಷಕ ನಟನಾಗಿ ಅಭಿನಯಿಸಿದ್ದರು.

1983ರಿಂದ ಸಿನಿಮಾದಲ್ಲಿ ಅಭಿಯಿಸಲು ಆರಂಭಿಸಿದರು. ಡಿಡಿ1 ಆರಂಭವಾದಾಗಿನಿಂದ ಪಾಪಾ ಪಾಂಡು ತನಕ ಹಲವಾರು ಧಾರವಾಹಿಗಳಲ್ಲಿ ಅಭಿನಯಿಸಿದ್ದರು.ಹಲವು ಕಲಾವಿದರ ಧ್ವನಿ ಅನುಕರಣೆ ಮಾಡುವುದರಲ್ಲಿ ಪರಿಣತರಾಗಿದ್ದರು. ನಟಿ ಕಲ್ಪನಾ ಧ್ವನಿಯನ್ನು ಅನುಕರಿಸುವುದರಲ್ಲಿ ನಿಪುಣರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News