ಆರೋಗ್ಯ ಸಿಬ್ಬಂದಿಗೆ ದೋಷಯುಕ್ತ ಪಿಪಿಇ ಕಿಟ್: ಬಿಜೆಪಿ ಸಂಸದ ಪ್ರತಾಪ್‍ ಸಿಂಹ ಕಳವಳ

Update: 2020-07-03 12:00 GMT

ಮೈಸೂರು: ಕೊರೋನ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿಗೆ ಒದಗಿಸಿರುವ ವೈಯಕ್ತಿಕ ಸುರಕ್ಷಾ ಸಾಧನಗಳು (ಪಿಪಿಇ) ದೋಷಯುಕ್ತವಾದವುಗಳು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಈ ಬಗ್ಗೆ ಕಳವಳ ವ್ಯಕ್ತಪಡಿಸಿ ರಾಜ್ಯ ಆರೋಗ್ಯ ಸಚಿವರಿಗೆ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಪಿಪಿಇ ಕಿಟ್ ಗಳು ದೋಷಯುಕ್ತವಾಗಿವೆ ಎಂದು ಆರೋಪಿಸಿರುವ ಫೇಸ್ ಬುಕ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.

ದೋಷಯುಕ್ತ ಮತ್ತು ಅಸಮರ್ಪಕ ಸುರಕ್ಷಾ ಸಾಧನಗಳಿಂದಾಗಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೇ ಸೋಂಕು ತಗುಲುತ್ತಿದೆ ಎಂದು ಆ ಫೇಸ್ ಬುಕ್ ಪೋಸ್ಟ್ ನಲ್ಲಿ ಆರೋಪಿಸಲಾಗಿದೆ. ಬೆಂಗಳೂರಿನ ವೈದ್ಯರು ದೋಷಯುಕ್ತ ಪಿಪಿಇ ಕಿಟ್ ಮತ್ತು ಎನ್-95 ಮಾಸ್ಕ್‍ಗಳ ಕೊರತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೂ ಟ್ವೀಟ್ ಟ್ಯಾಗ್ ಮಾಡಿರುವ ಅವರು, “ಇದು ನೈಜ ಕಳವಳ ಎಂದೆನಿಸುತ್ತದೆ” ಎಂದು ಬರೆದಿದ್ದಾರೆ.

ರಾಜ್ಯದಲ್ಲಿ ಪಿಪಿಇ ಕೊರತೆ ಇಲ್ಲ: ಈ ಬಗ್ಗೆ thenewsminute.comಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಡ್ರಗ್ ಲಾಜಿಸ್ಟಿಕ್ಸ್ ಮತ್ತು ವೇರ್‍ ಹೌಸಿಂಗ್ ಸೊಸೈಟಿ ಹೆಚ್ಚುವರಿ ನಿರ್ದೇಶಕಿ ಎನ್.ಮಂಜುಶ್ರೀ 4 ಲಕ್ಷ ಪಿಪಿಇ ದಾಸ್ತಾನು ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News