ರಾಜ್ಯ ಸರಕಾರ ಆಂಧ್ರಪ್ರದೇಶವನ್ನು ನೋಡಿ ಕಲಿಯಲಿ: ಸಿದ್ದರಾಮಯ್ಯ

Update: 2020-07-05 16:55 GMT

ಬೆಂಗಳೂರು, ಜು.5: ಕೋವಿಡ್ ಪೀಡಿತರಿಗಾಗಿಯೇ ಆಂಧ್ರಪ್ರದೇಶ ಸರಕಾರ ಅಲ್ಟ್ರಾ ಮಾಡರ್ನ್ ವೈದ್ಯಕೀಯ ಸಲಕರಣೆಗಳಿಂದ ಸಜ್ಜುಗೊಂಡಿರುವ ಒಂದು ಸಾವಿರಕ್ಕೂ ಹೆಚ್ಚು ಆಂಬುಲೆನ್ಸ್ ಸೇವೆಯನ್ನು 200 ಕೋಟಿ ರೂ.ವೆಚ್ಚದಲ್ಲಿ ಪ್ರಾರಂಭಿಸಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ, ಕೋವಿಡ್ ಪೀಡಿತರನ್ನು ಆಸ್ಪತ್ರೆಗೆ ಸಾಗಿಸಲು ವಿಶೇಷ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಆದರೆ, ಕರ್ನಾಟಕದಲ್ಲಿ ಆಂಬುಲೆನ್ಸ್ ಇಲ್ಲದೆ ಜನತೆ ಬೀದಿಯಲ್ಲಿ ಸಾಯುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರು ಇತರೆ ರಾಜ್ಯದ ಸರಕಾರದ ಕ್ರಮಗಳನ್ನು ನೋಡಿಯಾದರು ಕಲಿತುಕೊಳ್ಳಲಿ ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News