‘ಚಿ. ಶ್ರೀನಿವಾಸರಾಜು ಕಾವ್ಯ ಸ್ಪರ್ಧೆ’ಗೆ ಹಸ್ತಪ್ರತಿಗಳ ಆಹ್ವಾನ

Update: 2020-07-08 11:32 GMT

ಬೆಂಗಳೂರು, ಜು.8: ‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯು ‘ಚಿ. ಶ್ರೀನಿವಾಸರಾಜು ಕಾವ್ಯ ಸ್ಪರ್ಧೆ’ಗೆ ಹಸ್ತಪ್ರತಿಗಳನ್ನು ಆಹ್ವಾನಿಸಿದೆ.

40 ವರ್ಷದೊಳಗಿನ ಕವಿಗಳಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದ್ದು, ಆಯ್ಕೆಯಾದ ಕವನ ಸಂಕಲನವನ್ನು ‘ಸಂಗಾತ ಪುಸ್ತಕ’ವು ಪಿ.ಪಿ ಗೆಳೆಯರ ಬಳಗದ ಸಹಯೋಗದಲ್ಲಿ ಪ್ರಕಟಿಸಲಿದೆ.

ಜಿ.ಪಿ. ರಾಜರತ್ನಂ ಅವರ ಜನ್ಮದಿನವಾದ ಡಿ.5ರಂದು ಕೃತಿ ಬಿಡುಗಡೆ ಮಾಡಿ, ಪ್ರಶಸ್ತಿ ನೀಡಲಾಗುತ್ತದೆ. ಹಸ್ತಪ್ರತಿಗಳನ್ನು ಕಳುಹಿಸಲು ಆ.25 ಕಡೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 93417 57653 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಬಹುಮಾನ: ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕವು ಈ ಸಾಲಿನ ‘ಛಂದ ಪುಸ್ತಕ’ ಬಹುಮಾನಕ್ಕೆ ಹಸ್ತಪ್ರತಿಗಳನ್ನು ಆಹ್ವಾನಿಸಿದೆ.

ಈವರೆಗೆ ಕಥಾಸಂಕಲನ ಹೊರ ತಂದಿರದ ಲೇಖಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳನ್ನು ಪ್ರಕಟಿಸಿದವರು ಹಸ್ತಪ್ರತಿಗಳನ್ನು ಕಳುಹಿಸಬಹುದು.

ಆಯ್ಕೆಯಾದ ಕತೆಗಾರರಿಗೆ 30 ಸಾವಿರ ನಗದು ಬಹುಮಾನದ ಜತೆಗೆ ಅವರ ಕಥಾ ಸಂಕಲನವನ್ನು ಪ್ರಕಟಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 98444 22782 ಅನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News