ಅಬ್ದುಲ್ ಖಾದರ್ ಹಾಜಿ

Update: 2020-07-08 12:06 GMT

ಮಂಗಳೂರು, ಜು.8: ಎಡಪದವಿನ ಪ್ರಕಾಶ್ ಬೀಡಿ ಕಂಟ್ರಾಕ್ಟರ್‌ರಾಗಿದ್ದ ಜನಪ್ರಿಯ ಅಬ್ದುಲ್ ಖಾದರ್ ಹಾಜಿ(90) ಜು.8ರಂದು ನಿಧನರಾಗಿದ್ದಾರೆ.

ಸಾಮಾಜಿಕ, ಧಾರ್ಮಿಕ, ಮುಖಂಡರಾಗಿದ್ದ, ಅಬ್ದುಲ್ ಖಾದರ್ ಹಾಜಿ ಕೊಡುಗೈ ದಾನಿಯಾಗಿದ್ದರು. ಸರ್ವಧರ್ಮೀಯರಿಂದಲೂ ಆದರಿಸಲ್ಪಡುತ್ತಿದ್ದ ಅವರು ಜಾತ್ಯತೀತ ವ್ಯಕ್ತಿಯಾಗಿದ್ದರು.

ಎಡಪದವಿನ ಬೀಡಿ ಸೈಟ್ ಕಾಲನಿ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಇವರು, 38 ಮನೆಗಳ ನಿರ್ಮಾಣಕ್ಕೆ ನೇತೃತ್ವ ವಹಿಸಿದ್ದರು. ಎಡಪದವಿನ ದಾರುಸ್ಸಲಾಂ ವೆಲ್ಫೇರ್ ಅಸೋಸಿಯೇಶನ್ ನೇತೃತ್ವದಲ್ಲಿರುವ ಉಮ್ಮಹಾತುಲ್ ಮುಮಿನೀನ್ ಜುಮಾ ಮಸೀದಿಯ ನಿರ್ಮಾಣದಲ್ಲೂ ಪಾತ್ರವಹಿಸಿ 1998ರಿಂದ ಅದರ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಎಡಪದವಿನಲ್ಲಿ 15 ವರ್ಷಗಳ ಕಾಲ ತನ್ನ ಸ್ವಂತ ಕಟ್ಟಡದಲ್ಲಿ ಮದ್ರಸ ನಡೆಸುತ್ತಿದ್ದು, ಉಸ್ತಾದ್‌ರಿಗೆ ವೇತನ ಹಾಗೂ ಪ್ರತಿನಿತ್ಯ ಊಟೋಪಚಾರ ವ್ಯವಸ್ಥೆಯನ್ನೂ ಅವರೇ ಕಲ್ಪಿಸಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಅಳಿಯಂದಿರಾದ ಝಕೀರ್ ಹಸನ್ ಮತ್ತು ಬಿ.ಎಂ.ರಫೀಕ್ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಸಂತಾಪ: ಅಬ್ದುಲ್ ಖಾದರ್ ಹಾಜಿ ನಿಧನಕ್ಕೆ ಎಡಪದವಿನ ಉಮ್ಮಹಾತುಲ್ ಮುಮಿನೀನ್ ಜುಮಾ ಮಸೀದಿಯ ಅಧ್ಯಕ್ಷ ವೈ.ಮುಹಮ್ಮದ್ ಬ್ಯಾರಿ, ಉಪಾಧ್ಯಕ್ಷ ಎಂ.ಎಂ.ಶರೀಫ್, ಕಾರ್ಯದರ್ಶಿ ಮುಹಮ್ಮದ್ ಅಲಿ ಹಾಗೂಸದಸ್ಯರು ಸಂತಾಪ ಸೂಚಿಸಿದ್ದಾರೆ.

ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾ ೆಯ ಮುಖ್ಯ ಶಿಕ್ಷಕಿ ನಂದಾ ಗಡಿಯಾರ ಹಾಗೂ ಎಲ್ಲ ಶಿಕ್ಷಕಿಯರು ಸಂತಾಪ ಸೂಚನೆ ಸಭೆ ಜರುಗಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ