ಜನರು ಬೆಂಗಳೂರಿನಲ್ಲಿ ಉಳಿದುಕೊಳ್ಳುವಂತಹ ವಾತಾವರಣವನ್ನು ಸರಕಾರ ಕಲ್ಪಿಸಬೇಕಿತ್ತು: ಸಿದ್ದರಾಮಯ್ಯ

Update: 2020-07-08 18:13 GMT

ಬೆಂಗಳೂರು, ಜು. 8: `ಕೊರೋನ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಖರ್ಚು-ವೆಚ್ಚಗಳ ಸೂಕ್ತ ಮಾಹಿತಿ ಸರಕಾರದ ಬಳಿಯಿದ್ದರೆ ಅಧಿಕಾರಿಗಳ ಜೊತೆ ಅದನ್ನು ಕಳುಹಿಸಿಕೊಡಲಿ, ನಾನೂ ಒಮ್ಮೆ ನೋಡುತ್ತೇನೆ. ತಾರ್ತಿಕ ಅಂತ್ಯ ಕಾಣುವವರೆಗೂ ಈ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ. ಜನರ ಹಣ, ಜನರಿಗೆ ಲೆಕ್ಕ ಕೊಡಬೇಕು. ಇದನ್ನು ಕೇಳುವುದರಲ್ಲಿ ತಪ್ಪೇನಿದೆ?' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, `ಹಳಿಗಳಿಂದ ಬಂದ ಜನರು ಬೆಂಗಳೂರಿನಲ್ಲಿ ಉಳಿದುಕೊಳ್ಳುವಂತಹ ವಾತಾವರಣವನ್ನು ಸರಕಾರ ಕಲ್ಪಿಸಬೇಕಿತ್ತು. ಆಗ ಅವರು ಮರಳಿ ಹಳ್ಳಿ ಕಡೆ ಮುಖ ಮಾಡುವಂತಹ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ. ಅವರಿಗೆ ವಸತಿ, ಉದ್ಯೋಗ ನೀಡುವ ಜೊತೆಗೆ ಕೊರೋನ ಸೋಂಕು ನಿಯಂತ್ರಿಸುವಲ್ಲಿ ಸರಕಾರ ವಿಫಲವಾಗಿರುವುದೇ ಜನ ಹಳ್ಳಿಗಳಿಗೆ ಮರಳಲು ಕಾರಣ' ಎಂದು ಟೀಕಿಸಿದ್ದಾರೆ.

'ಲಾಕ್‍ಡೌನ್ ನಂತರವೇ ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ಹಾಗಾದರೆ ಲಾಕ್‍ಡೌನ್ ನಿಂದಾಗಿ ಪ್ರಯೋಜನವೇನು? ಈಗ ನಿಜವಾಗಿ ಲಾಕ್‍ಡೌನ್ ಆಗತ್ಯವಿದೆ. ಸರಕಾರ ಕೇವಲ ಆರ್ಥಿಕತೆಗೆ ಮಹತ್ವ ನೀಡುತ್ತಿದೆ. ಜನರ ಜೀವಗಳಿಗೆ ಬೆಲೆ ಇಲ್ಲವೇ?' ಎಂದು ಸಿದ್ದರಾಮಯ್ಯ, ರಾಜ್ಯ ಮತ್ತು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಬೇಡ ಎಂದು ನಾನೂ ಹೇಳಿದ್ದೇ. ಇದರಿಂದ ನಿರೀಕ್ಷಿಸಿದ ಹಾಗೆ ಮತ ಧ್ರುವೀಕರಣ ಆಗುವುದಿಲ್ಲ ಎಂಬುದು ನನ್ನ ಲೆಕ್ಕಾಚಾರವಾಗಿತ್ತು. ಮೈತ್ರಿ ಮಾಡಿಕೊಳ್ಳದೆ ಇದ್ದಿದ್ದರೆ ಕನಿಷ್ಟ 7-8 ಸ್ಥಾನಗಳನ್ನು ಗೆಲ್ಲುತ್ತಿದ್ದೆವು' ಎಂದು ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

`ಹಲವು ಮಂದಿ ತಜ್ಞರು ಕೇವಲ ಆನ್ ಲೈನ್ ಶಿಕ್ಷಣದಿಂದ ಮಕ್ಕಳ ಮನೋವಿಕಾಸ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ'

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News