ಭೂಗತ ಪಾತಕಿ ರವಿ ಪೂಜಾರಿ ಕೋವಿಡ್ 19 ವರದಿ ನೆಗಟಿವ್

Update: 2020-07-08 18:14 GMT

ಬೆಂಗಳೂರು, ಜು.8: ಇತ್ತೀಚಿಗೆ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದ ಭೂಗತ ಪಾತಕಿ ರವಿ ಪೂಜಾರಿಯ ವರದಿ ನೆಗಟಿವ್ ಬಂದಿದ್ದು, ಈ ಹಿನ್ನೆಲೆ ಕೊಲೆ ಪ್ರಕರಣವೊಂದರ ಸಂಬಂಧ ಆತನ ವಿಚಾರಣೆ ತೀವ್ರಗೊಳಿಸಲಾಗಿದೆ.

ಬಂಧಿತ ಆರೋಪಿಯೊಬ್ಬರಿಗೆ ಕೊರೋನ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಕೆಲ ಪೊಲೀಸ್ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿದ್ದು ಸಿಸಿಬಿ ಕೇಂದ್ರ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿತ್ತು.

ಅದೇ ವೇಳೆ ಪೊಲೀಸರ ವಶದಲ್ಲಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಕೊಲೆ ಪ್ರಕರಣದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಅನಾರೋಗ್ಯವುಳ್ಳ ರವಿ ಪೂಜಾರಿಗೆ ಕೊರೋನ ಸೋಂಕಿನ ಆಂತಕದ ಕಾರಣದಿಂದಾಗಿ ಇತ್ತೀಚಿಗೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ರವಿ ಪೂಜಾರಿಯ ಕೋವಿಡ್ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News