ಕಲಾಸಿಪಾಳ್ಯ- ಕೆ.ಆರ್. ಮಾರುಕಟ್ಟೆ ಜು.31ರವರೆಗೆ ಸೀಲ್‍ಡೌನ್

Update: 2020-07-09 16:00 GMT

ಬೆಂಗಳೂರು, ಜು.9: ಕೊರೋನ ವೈರಸ್ ನಿಯಂತ್ರಣಕ್ಕೆ ಬಾರದ ಕಾರಣ ಕೆ.ಆರ್. ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಮಾರುಕಟ್ಟೆಗಳ ಸೀಲ್‍ಡೌನ್‍ಅನ್ನು ಜು.31ರವರೆಗೆ ವಿಸ್ತರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ.

ಕೊರೋನ ಸೋಂಕಿತರು ಹೆಚ್ಚಾದ ಕಾರಣ ಜೂ.22ರಂದು ಎರಡೂ ಮಾರುಕಟ್ಟೆಗಳನ್ನು ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಕೊರೋನ ನಿಯಂತ್ರಣಕ್ಕೆ ಬಾರದಿರುವುದರಿಂದ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ. ಹೀಗಾಗಿ ಜುಲೈ ತಿಂಗಳಾಂತ್ಯದವರೆಗೆ ಸೀಲ್ ಡೌನ್ ಮಾಡಲಾಗುವುದು. ಹೀಗಾಗಿ ಮಾರುಕಟ್ಟೆಯಲ್ಲಿ ಯಾವುದೇ ಮಾರಾಟ ಮಳಿಗೆಗಳು ತೆರೆಯುವುದಿಲ್ಲ ಎಂದು ಬಿಬಿಎಂಪಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News