ಅದೃಷ್ಟದ ಶೀಟ್‍ಗಳು ಎಂದು ನಂಬಿಸಿ ಮಾರಾಟ: ಆರೋಪಿಯ ಬಂಧನ

Update: 2020-07-09 17:30 GMT

ಬೆಂಗಳೂರು, ಜು.9: ಲೋಹ ಲೇಪನದ ರಟ್ಟಿನ ಶೀಟ್‍ಗಳನ್ನು ಹಿಂದಿನ ಕಾಲದ ಅದೃಷ್ಟ ತಂದುಕೊಡುವ ಅಪರೂಪದ ವಸ್ತುವೆಂದು ನಂಬಿಸಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಯಶವಂತಪುರ ಪೋಲಿಸರು ಬಂಧಿಸಿದ್ದಾರೆ.

ಬಂಧಿತನನ್ನು ಹೈದ್ರಾಬಾದ್ ಮೂಲದ ಸುಬ್ರಮಣ್ಯ(63) ಎಂದು ಗುರುತಿಸಲಾಗಿದೆ. ರಟ್ಟಿನ ಶೀಟ್‍ನಲ್ಲಿ ಹಳೇ ಕಾಲದ ಲಿಪಿಯಂತೆ ಬರೆದಿದ್ದ ಎರಡು ರಟ್ಟನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಆರೀಫ್ ಎಂಬವನು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ.

ಬಾಲಸುಬ್ರಹ್ಮಣ್ಯಗೆ ಆರೀಫ್ ಕೆಲ ವರ್ಷಗಳ ಹಿಂದೆ ಪರಿಚಯವಾಗಿದ್ದರು. ಆರೀಫ್ ರಟ್ಟಿನ ಮೇಲೆ ಹಿತ್ತಾಳೆ ಹಾಗೂ ತಾಮ್ರ ಲೋಹವನ್ನು ಲೇಪಿಸುತ್ತಿದ್ದ. ಅದರ ಮೇಲೆ ಪುರಾತನ ಕಾಲದ ಲಿಪಿಯಂತೆ ಹೋಲುವ ಅಕ್ಷರಗಳನ್ನು ಬರೆದು ಶೀಟ್‍ಗಳನ್ನು ತಯಾರಿಸುತ್ತಿದ್ದನು. ಜು.7ರಂದು ಆರ್‍ಟಿಒ ಕಾಂಪ್ಲೆಕ್ಸ್ ಬಳಿ ಜನರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ಬಗ್ಗೆ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ಈ ಹಿಂದೆ ನಗರದ ಹಲವೆಡೆ ಲಕ್ಷಾಂತರ ರೂ.ವಂಚಿಸಿರುವುದು ವಿಚಾರಣೆಯಿಂದ ಗೊತ್ತಾಗಿದ್ದು, ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News