ಕೋವಿಡ್ 19: ಇಂಡಿಯನ್ ಸೋಶಿಯಲ್ ಫೋರಂ, ಬಹ್ರೈನ್ ಕರ್ನಾಟಕ ಘಟಕದ ವತಿಯಿಂದ ನಾಲ್ಕನೆ ಹಂತದ ನೆರವು ಕಾರ್ಯಾಚರಣೆ

Update: 2020-07-11 12:03 GMT

ಬಹ್ರೈನ್: ಕೋವಿಡ್-19 ನಾಲ್ಕನೆ ಹಂತದ ನೆರವು ಕಾರ್ಯಾಚರಣೆಯ ಭಾಗವಾಗಿ ಇಂಡಿಯನ್ ಸೋಶಿಯಲ್ ಫ಼ೋರಂ, ಬಹ್ರೈನ್ ಕರ್ನಾಟಕ ಘಟಕವು ಅನಿವಾಸಿ ಭಾರತೀಯರಿಗೆ 65 ಆಹಾರ ಕಿಟ್‌ ಗಳನ್ನು ಜೂನ್ ತಿಂಗಳಲ್ಲಿ ವಿತರಿಸಿದೆ ಎಂದು ಸಂಘಟನೆಯ ಅಧ್ಯಕ್ಷ ಇರ್ಫಾನ್ ಅಬ್ದುಲ್ ರಹ್ಮಾನ್ ತಿಳಿಸಿದ್ದಾರೆ.

ಸಂಘಟನೆಯ ವತಿಯಿಂದ 27 ವೈದ್ಯಕೀಯ ಪ್ರಕರಣಗಳನ್ನು ನಿಭಾಯಿಸಲಾಗಿದೆ‌. ಸಂಕಷ್ಟಕ್ಕೊಳಗಾಗಿ ತವರಿಗೆ ವಾಪಾಸಾಗಲು ಬಯಸಿದ ಮೂವರಿಗೆ ಟಿಕೆಟ್ ನೀಡಲಾಗಿದೆ. ಅಲ್ಲದೆ 18 ಮಂದಿಯ ವಾಪಾಸಾತಿಗೆ ನೆರವಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗಿರುವ ಅನಿವಾಸಿಗರಿಗಾಗಿ ನೆರವು ಕಾರ್ಯಾಚರಣೆಯನ್ನು ಇಂಡಿಯನ್ ಸೋಶಿಯಲ್ ಬಹರೈನ್ ಅಧ್ಯಕ್ಷರಾದ ಅಬ್ದುಲ್ ಜವಾದ್ ಪಾಷಾ ಚಿಕ್ಕಬಳ್ಳಾಪುರ ಇವರ ನೇತೃತ್ವದಲ್ಲಿ ಮುಂದುವರಿಯಲಿದೆಯೆಂದು ಇರ್ಫಾನ್ ಅಬ್ದುಲ್ ರಹ್ಮಾನ್ ಪ್ರಕಟನೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News