ರವಿವಾರದಿಂದ ಭಾರತೀಯ ವಲಸಿಗರು ಯುಎಇಗೆ ಮರಳಲು ಅವಕಾಶ

Update: 2020-07-11 15:24 GMT

ದುಬೈ, ಜು. 11: ಭಾರತದಲ್ಲಿ ಬಾಕಿಯಾಗಿರುವ ಯುಎಇಯ ಭಾರತೀಯ ವಲಸಿಗರು ರವಿವಾರದಿಂದ (ಇಂದಿನಿಂದ) ಯುಎಇಗೆ ಮರಳಬಹುದಾಗಿದೆ. ಈ ಸಂಬಂಧ ಭಾರತ ಮತ್ತು ಯುಎಇ ನಡುವೆ 15 ದಿನಗಳ ಒಪ್ಪಂದವೊಂದು ಏರ್ಪಟ್ಟಿದೆ.

ಮೊದಲ ವಿಮಾನವು ಹೊಸದಿಲ್ಲಿಯಿಂದ ಹೋಗುವ ಏರ್ ಇಂಡಿಯಾ ವಿಶೇಷ ವಿಮಾನವಾಗಿದ್ದು, ರವಿವಾರ (ಇಂದು) ಬೆಳಗ್ಗೆ 10:40ರ ಸುಮಾರಿಗೆ ಶಾರ್ಜಾದಲ್ಲಿ ಇಳಿಯಲಿದೆ. ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳು ಶಾರ್ಜಾ, ದುಬೈ ಮತ್ತು ಅಬುಧಾಬಿಗಳಲ್ಲಿ ಇಳಿಯಲಿವೆ. ಅದೇ ವೇಳೆ, ರಾಸ್ ಅಲ್ ಖೈಮಾಕ್ಕೆ ವಿಮಾನ ಹಾರಿಸುವುದಾಗಿ ಸ್ಪೈಸ್ ಜೆಟ್ ಘೋಷಿಸಿದೆ.

ಭಾರತದ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಕೂಡ ಹೊಸದಿಲ್ಲಿ, ಮುಂಬೈ, ಕೋಯಿಕೋಡ್ ಮತ್ತು ಕೊಚ್ಚಿಯಿಂದ ಯುಎಇಯ ರಾಸ್ ಅಲ್ ಖೈಮಾಗೆ ಜುಲೈ 12ರಿಂದ 26ರ ನಡುವಿನ ಅವಧಿಯಲ್ಲಿ ಅರ್ಹ ಐಸಿಎ ಅಂಗೀಕೃತ ಯುಎಇ ನಿವಾಸಿಗಳಿಗಾಗಿ ವಿಮಾನ ಹಾರಾಟಗಳನ್ನು ನಡೆಸಲಿದೆ ಎಂಬುದಾಗಿ ಪಿಟಿಐ ಶನಿವಾರ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News