ರಾಜಸ್ಥಾನದಲ್ಲಿ ಕಾಂಗ್ರೆಸ್ ಬಿಕ್ಕಟ್ಟು ಉಲ್ಬಣ: ಬೆಂಬಲಿಗ ಶಾಸಕರೊಂದಿಗೆ ಹೈಕಮಾಂಡ್ ಭೇಟಿಯಾದ ಸಚಿನ್ ಪೈಲಟ್

Update: 2020-07-12 07:22 GMT

ಹೊಸದಿಲ್ಲಿ, ಜು.12: ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ತನ್ನ 8 ಆಪ್ತ ಶಾಸಕರ ಜೊತೆಗೆ ದಿಲ್ಲಿಗೆ ತಲುಪಿದ್ದು, ಸರಕಾರದಲ್ಲಿ ಆಗುತ್ತಿರುವ ಬಿಕ್ಕಟ್ಟಿನ ಕುರಿತಂತೆ ಪಕ್ಷದ ನಾಯಕರಲ್ಲಿ ಮಾತನಾಡಲಿದ್ದಾರೆ.

ಮಾರ್ಚ್‌ ನಲ್ಲಿ ಮಧ್ಯಪ್ರದೇಶದ ಕಮಲನಾಥ್ ನೇತೃತ್ವದ ಸರಕಾರವನ್ನು ಉರುಳಿಸಿದಂತೆಯೇ ನಮ್ಮ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷ ಒಡ್ಡುವ ಮೂಲಕ ರಾಜ್ಯ ಸರಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ಆರೋಪಿಸಿದ್ದರು.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ರಾಜಸ್ಥಾನದ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜಸ್ಥಾನದ ಸರಕಾರದ ಬಿಕ್ಕಟ್ಟಿನ ಬಗ್ಗೆ ಗಮನಹರಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ, ಏನೇ ಭಿನ್ನಾಭಿಪ್ರಾಯವಿದ್ದರೂ ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕೆಂದು ಸಲಹೆ ನೀಡಿದ್ದಾರೆ.

ಹಣದ ಆಮಿಷಕ್ಕೆ ಒಳಗಾಗಿರುವ ಮೂವರು ಪಕ್ಷೇತರ ಶಾಸಕರನ್ನು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ಶಾಖೆ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷದ ಹಿರಿಯ ನಾಯಕರ ಧೋರಣೆಯಿಂದ ಬೇಸತ್ತು ತನ್ನ 22 ಬೆಂಬಲಿಗರ ಶಾಸಕರೊಂದಿಗೆ ಕಮಲನಾಥ್ ಸರಕಾರಕ್ಕೆ ಕೈಕೊಟ್ಟ ಕಾರಣ ಕಾಂಗ್ರೆಸ್ ಸರಕಾರ ಉರುಳಿಬಿದ್ದಿತ್ತು. ಇದೀಗ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಗೆಹ್ಲೋಟ್ ಜೊತೆಗೆ ಮುನಿಸಿಕೊಂಡಿರುವ ಸಚಿನ್ ಪೈಲಟ್ ಕೂಡ ಸಿಂಧಿಯಾರ ಹಾದಿ ತುಳಿಯುತ್ತಾರೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News