ವಿದ್ಯಾರ್ಥಿ ನಾಯಕ ಶರ್ಜಿಲ್ ಉಸ್ಮಾನಿ ಬಿಡುಗಡೆಗೆ ವೆಲ್ಫೇರ್ ಪಾರ್ಟಿ ಆಗ್ರಹ

Update: 2020-07-15 18:01 GMT

ಬೆಂಗಳೂರು, ಜು.15: ಫೆಟರ್ನಿಟಿ ಮೂವ್ಮೆಂಟ್‍ನ ವಿದ್ಯಾರ್ಥಿ ನಾಯಕ ಶರ್ಜೀಲ್ ಉಸ್ಮಾನಿ ಬಂಧನವನ್ನು ತೀವ್ರವಾಗಿ ಖಂಡಿಸಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಡಾ.ಎಸ್.ಕ್ಯೂ.ಆರ್.ಇಲ್ಯಾಸ್, ತಕ್ಷಣ ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ.

ಅಮಾಯಕ ಶರ್ಜೀಲ್ ಉಸ್ಮಾನಿ ಬಂಧನವು ದೇಶದ ಜಾತ್ಯತೀತೆಯ ಮೇಲೆ ಮತ್ತೊಂದು ಕಳಂಕವಾಗಿದೆ. ಕೇಂದ್ರ ಸರಕಾರ ಅಭಿಪ್ರಾಯ ಭೇದ ಹಾಗೂ ಮುಕ್ತ ವಿಚಾರಗಳ ಬೇಟೆ ನಡೆಸುತ್ತಿದೆ. ಆ ಮೂಲಕ ಅದರ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಮಾಯಕ ಜನರನ್ನು ಮತ್ತು ವಿದ್ಯಾರ್ಥಿ ಕಾರ್ಯಕರ್ತರನ್ನು ಬಂಧಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಇಲ್ಯಾಸ್ ಆರೋಪಿಸಿದ್ದಾರೆ.

ಅದರ ವಿರುದ್ಧ ಪ್ರತಿಭಟಿಸುವುದು ಜನರ ಮತ್ತು ವಿದ್ಯಾರ್ಥಿ ಕಾರ್ಯಕರ್ತರ ಪ್ರಜಾಪ್ರಭುತ್ವದ ಹಕ್ಕು ಎಂಬುದನ್ನು ಸರಕಾರ ಮರೆಯಬಾರದು. ಆದುದರಿಂದ, ಶರ್ಜೀಲ್ ಉಸ್ಮಾನಿ ಸೇರಿದಂತೆ ಎಲ್ಲ ಅಮಾಯಕ ಕಾರ್ಯಕರ್ತರನ್ನು ಬೇಷರತ್ತಾಗಿ ಮತ್ತು ನಷ್ಟ ಪರಿಹಾರದೊಂದಿಗೆ ತಕ್ಷಣ ಬಿಡುಗಡೆ ಮಾಡಬೇಕೆಂದು ಇಲ್ಯಾಸ್ ಒತ್ತಾಯಿಸಿದ್ದಾರೆ.

ಅಧಿಕಾರ ದುರ್ಬಳಕೆ ಮಾಡಿಕೊಂಡ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು ಮತ್ತವರ ರಾಜಕೀಯ ನೇತಾರರನ್ನು ಹೊಣೆಗಾರರನ್ನಾಗಿ ಮಾಡಬೇಕು. ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಸರಕಾರವನ್ನು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News