ಮಾರ್ಕಸ್ ರಾಶ್ಫೋರ್ಡ್‌ಗೆ ಮ್ಯಾಂಚೆಸ್ಟರ್ ವಿವಿ ಗೌರವ ಡಾಕ್ಟರೇಟ್

Update: 2020-07-16 05:37 GMT

ಮ್ಯಾಂಚೆಸ್ಟರ್: ಮ್ಯಾಂಚೆಸ್ಟರ್ ಯುನೈಟೆಡ್ ತಾರೆ ಮಾರ್ಕಸ್ ರಾಶ್ಫೋರ್ಡ್ ದಿ ಯುನಿವರ್ಸಿಟಿ ಆಫ್ ಮ್ಯಾಂಚೆಸ್ಟರ್‌ನಿಂದ ಗೌರವ ಡಾಕ್ಟರೇಟ್ ಪದವಿ ಪಡೆಯಲು ಸಜ್ಜಾಗಿದ್ದಾರೆ.

 ರಾಶ್ಫೋರ್ಡ್ ಈ ಗೌರವ ಪಡೆದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ರಾಶ್ಫೋರ್ಡ್ ಫುಟ್ಬಾಲ್ ಆಟಗಾರನಾಗಿ ಮತ್ತು ಮಕ್ಕಳ ಬಡತನದ ವಿರುದ್ಧ ಉತ್ಸಾಹಿ ಪ್ರಚಾರಕರಾಗಿ ಗುರುತಿಸಿಕೊಂಡಿದ್ದಾರೆ.

22ರ ಹರೆಯದ ರಾಶ್ಫೋರ್ಡ್ ಗೌರವ ಡಾಕ್ಟರೇಟ್ ಪಡೆಯುವ ಮೂಲಕ ಮ್ಯಾಂಚೆಸ್ಟರ್ ಯುನೈಟೆಡ್ ದಂತಕತೆ ಸರ್ ಅಲೆಕ್ಸ್ ಫರ್ಗುಸನ್ ಮತ್ತು ಸರ್ ಬಾಬಿ ಚಾರ್ಲ್ಟನ್‌ನ್ನು ಅನುಸರಿಸಲಿದ್ದಾರೆ. ಇದು ವಿಶ್ವವಿದ್ಯಾಲಯವು ನೀಡುವ ಅತ್ಯುನ್ನತ ಗೌರವವಾಗಿದೆ.

 ‘‘ಇದು ನನ್ನ ಮತ್ತು ನನ್ನ ಕುಟುಂಬಕ್ಕೆ ಹೆಮ್ಮೆಯ ದಿನವಾಗಿದೆ. ಈ ಹಿಂದೆ ಈ ಡಾಕ್ಟರೇಟ್ ಪಡೆದ ದೊಡ್ಡ ಹೆಸರುಗಳನ್ನು ನೋಡಿದಾಗ ಹೆಮ್ಮೆ ಯಾಗುತ್ತದೆ’’ ಎಂದು ಮಾರ್ಕಸ್ ರಾಶ್ಫೋರ್ಡ್ ಕ್ಲಬ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

‘‘ ಈ ದೇಶದಲ್ಲಿ ಮಕ್ಕಳ ಬಡತನವನ್ನು ಎದುರಿಸುವ ಹೋರಾಟದಲ್ಲಿ ನಾವು ಇನ್ನೂ ಬಹಳ ದೂರ ಸಾಗಬೇಕಾಗಿದೆ. ಆದರೆ ನಿಮ್ಮ ನಗರದಿಂದ ಮಾನ್ಯತೆ ಪಡೆಯುವುದು ಎಂದರೆ ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಮತ್ತು ಬಹಳಷ್ಟು ಸಾಗಿದ್ದೇವೆ ಎಂದರ್ಥ. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯಕ್ಕೆ ಧನ್ಯವಾದಗಳು’’ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News