ಪೊಲೀಸರ ಜೊತೆ ಸ್ವಯಂ ಸೇವಕರಾಗಲು 9 ಸಾವಿರಕ್ಕೂ ಹೆಚ್ಚು ಜನರ ನೋಂದಣಿ

Update: 2020-07-16 18:00 GMT

ಬೆಂಗಳೂರು, ಜು.16: ಲಾಕ್‍ಡೌನ್ ವೇಳೆ ನಗರದ ಪೊಲೀಸರಿಗೆ ಹೆಗಲುಕೊಟ್ಟು ಕೆಲಸ ಮಾಡಲು ಹಲವರು ಆಸಕ್ತರಾಗಿದ್ದು, ಕಳೆದೆರಡು ದಿನದಲ್ಲಿ ಸುಮಾರು 9 ಸಾವಿರಕ್ಕೂ ಹೆಚ್ಚು ಜನರು ಪೊಲೀಸರ ಜೊತೆ ಸ್ವಯಂಸೇವಕರಾಗಿ ಕೆಲಸ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.

ಸಿಬ್ಬಂದಿ ಕೊರತೆ ಕಾರಣದಿಂದಾಗಿ ಲಾಕ್‍ಡೌನ್ ಸಂದರ್ಭದಲ್ಲಿ ಸಿವಿಲ್ ಪೊಲೀಸರಾಗಿ ಕಾರ್ಯ ನಿರ್ವಹಿಸಲು ಇಚ್ಛಿಸುವ, 18ರಿಂದ 45 ವರ್ಷ ವಯಸ್ಸಿನವರು ನೋಂದಣಿ ಮಾಡಿಕೊಳ್ಳುವಂತೆ ಭಾಸ್ಕರ್ ರಾವ್ ಕರೆ ನೀಡಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಲಾಕ್‍ಡೌನ್ ವೇಳೆ ಪೊಲೀಸರ ಜೊತೆ ಕೆಲಸ ಕಾರ್ಯಗಳಲ್ಲಿ ಸ್ವಯಂಸೇವಕರು ಭಾಗಿಯಾಗಲಿದ್ದಾರೆ. ರಸ್ತೆಗಳಲ್ಲಿ ಬಂದೋಬಸ್ತ್, ಬ್ಯಾರಿಕೇಡ್ ಬಳಿ ವಾಹನಗಳ ತಪಾಸಣೆ,ಪೊಲೀಸ್ ಠಾಣೆಗಳಲ್ಲಿ ಕಂಪ್ಯೂಟರ್ ಆಪರೇಟಿಂಗ್ ಸೇರಿದಂತೆ ಹಲವು ಕೆಲಸಗಳಿಗೆ ಇವರನ್ನ ನಿಯೋಜನೆ ಮಾಡಲಾಗುತ್ತದೆ. ಹಂತ-ಹಂತವಾಗಿ ಇಲಾಖೆಯಿಂದ ನಗರದ ಪ್ರತಿ ಠಾಣೆಯಲ್ಲಿ ಸ್ವಯಂಸೇವಕರ ನೇಮಕವಾಗಲಿದೆ.

ಸಿವಿಲ್ ಪೊಲೀಸ್‍ಗೆ ನೋಂದಣಿ ಎಷ್ಟು?

* ದಕ್ಷಿಣ ವಿಭಾಗ-1967  * ಉತ್ತರ ವಿಭಾಗ -1884

* ಪಶ್ಚಿಮ ವಿಭಾಗ -1532  * ಪೂರ್ವ ವಿಭಾಗ -1184 

* ಆಗ್ನೇಯ ವಿಭಾಗ -1070  * ವೈಟ್ ಫಿಲ್ಡ್ ವಿಭಾಗ-740

* ಕೇಂದ್ರ ವಿಭಾಗ-542  ಈಶ್ಯಾನ ವಿಭಾಗ -706

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News