×
Ad

ಬೆಂಗಳೂರು: ಹಾಸಿಗೆ ಇಲ್ಲದೆ ರೋಗಿ ಸಾವು; ಆರೋಪ

Update: 2020-07-16 23:43 IST

ಬೆಂಗಳೂರು, ಜು.16: ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಆಸ್ಪತ್ರೆಗಳ ನಿರ್ಲಕ್ಷದಿಂದ ಹೊರರೋಗಿಗಳ ಸಾವಿನ ಪ್ರಮಾಣ ಏರಿಕೆ ಆಗುತ್ತಿದ್ದು, ಗುರುವಾರ ಸಹ ಆಸ್ಪತ್ರೆಯಲ್ಲಿ ಹಾಸಿಗೆ ದೊರೆಯದ ಕಾರಣ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇಲ್ಲಿನ ರಾಜಾಜಿನಗರ ವಾರ್ಡ್-99ರ ಮಂಜುನಾಥ ನಗರದ ನಿವಾಸಿ ಚಂದ್ರಶೇಖರ್ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ಮೂರು ದಿನಗಳಿಂದ ಆಸ್ಪತ್ರೆಗಳಿಗೆ ಅಲೆದಾಡಿದ್ದರು ಎನ್ನಲಾಗಿದೆ. ಆದರೆ, ಯಾವುದೇ ಆಸ್ಪತ್ರೆ ಅವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲು ಮುಂದಾಗಿಲ್ಲ. ಹೀಗಾಗಿ, ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News