×
Ad

ಆನಡ್ಕ ಸುಬ್ರಾಯ ಆಚಾರ್ಯ

Update: 2020-07-17 19:33 IST

ಮೂಡುಬಿದಿರೆ : ಪುತ್ತಿಗೆ ಗ್ರಾಮದ ಆನಡ್ಕ ನಿವಾಸಿ ಶತಾಯುಷಿ, ಕಾಷ್ಠಶಿಲ್ಪಿ ಆನಡ್ಕ ಸುಬ್ರಾಯ ಆಚಾರ್ಯ (102) ಗುರುವಾರ ಸ್ವಗೃಹದಲ್ಲಿ ನಿಧನರಾದರು.

ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೊಳಪಟ್ಟ ಆನಡ್ಕ ಕೂಡುವಳಿಕೆಯ ಮೊಕ್ತೇಸರರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು. ಹವ್ಯಾಸಿ ಯಕ್ಷಗಾನ ಅರ್ಥಧಾರಿಯಾಗಿ, ಭಾಗವತರಾಗಿ ದಶಕಗಳ ಕಾಲ ಯಕ್ಷಗಾನ ರಂಗದಲ್ಲಿ ಗುರುತಿಸಿಕೊಂಡಿದ್ದರು. ಅವರಿಗೆ ಪತ್ನಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಜಂಟಿ ನಿರ್ದೇಶಕ ಸದಾನಂದ ಆಚಾರ್ಯ ಸಹಿತ ಆರು ಮಂದಿ ಪುತ್ರರು, ಮೂವರು ಪುತ್ರಿಯರು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News