ಕೆ. ಕೃಷ್ಣಪ್ಪ
Update: 2020-07-17 21:39 IST
ಮಂಗಳೂರು, ಜು.17: ಕೋಟೆಕಾರು ಸಂಕೋಳಿಗೆ ನಿವಾಸಿ ಕೆ.ಕೃಷ್ಣಪ್ಪ ಕುಲಾಲ್ (85) ಅಲ್ಪಕಾಲದ ಅಸೌಖ್ಯದಿಂದ ಜು.16ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಸುಮಾರು 35 ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಪುತ್ರ ಬಿಜೆಪಿ ಯುವಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಜಯಂತ್ ಸಂಕೋಳಿಗೆ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಸಂತಾಪ: ಮೃತರ ನಿಧನಕ್ಕೆ ಸೋಮೇಶ್ವರ ಪುರಸಭಾ ಅಧ್ಯಕ್ಷ ರಾಜೇಶ ಉಚ್ಚಿಲ, ಕೋಟೆಕಾರ್ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರು, ಉದಯಕುಮಾರ್ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.