ವಿಜಯ ಕುಮಾರ್
Update: 2020-07-17 22:08 IST
ಮೂಡುಬಿದಿರೆ: ನಿತೇಶ್ ಇಲೆಕ್ಟ್ರಿಕಲ್ಸ್ ಮಾಲಕ, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಮೂಡುಬಿದಿರೆ ಘಟಕದ ಮಾಜಿ ಕೋಶಾಧಿಕಾರಿ ವಿಜಯಕುಮಾರ್ (50) ಜು.15ರಂದು ನಿಧನ ಹೊಂದಿದರು.
ಪತ್ನಿ, ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ. ಇಲ್ಲಿನ ಲಾಡಿಯ ನಾಗಬ್ರಹ್ಮ ಪೂಜಾ ಸಮಿತಿಯ ಕೋಶಾಧಿಕಾರಿ, ಹಜಂಕಾಲಬೆಟ್ಟು ಸೇವಾ ಸಮಿತಿಯ ಜತೆಕಾರ್ಯದರ್ಶಿಯಾಗಿದ್ದು ಹಲವು ಸಮಾಜ ಸೇವಾ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.