ಜಲಮಂಡಳಿ: ಆನ್‍ಲೈನ್‍ನಲ್ಲಿ ಬಿಲ್‍ ಪಾವತಿಗೆ ಅವಕಾಶ

Update: 2020-07-17 18:21 GMT

ಬೆಂಗಳೂರು, ಜು.17: ಜಲಮಂಡಳಿ ನೋಂದಾಯಿತ ಗ್ರಾಹಕರ ಮೊಬೈಲ್ ಸಂಖ್ಯೆಗಳಿಗೆ ಆನ್‍ಲೈನ್ ಮೂಲಕ ನೀರಿನ ಬಿಲ್ ವಿವರಗಳನ್ನು ಎಸ್‍ಎಂಎಸ್ ಮಾಡಲಾಗುತ್ತಿದ್ದು, ಆನ್‍ಲೈನ್ ಮೂಲಕ ಪಾವತಿ ಮಾಡುವಂತೆ ತಿಳಿಸಿದೆ.

ಜಲಮಂಡಳಿ ವೆಬ್‍ಸೈಟ್ www.bwssb.gov.inನಲ್ಲೂ ಬಿಲ್ ಮಾಹಿತಿ ಪ್ರಕಟಿಸಲಾಗುತ್ತಿದೆ. ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮುಖಾಂತರವೂ ಹಣ ಪಾವತಿಸಬಹುದು. ಈ ಕುರಿತು ಹೆಚ್ಚಿನ ವಿವರಗಳಿಗೆ ದೂ.080-22238888, ವಾಟ್ಸಾಪ್ ಸಂಖ್ಯೆ 8762228888ಕ್ಕೆ ಸಂಪರ್ಕಿಸ ಬಹುದಾಗಿದೆ.

ಕಾಲರಾ ನಿಯಂತ್ರಣ: ಜಲಮಂಡಳಿ ವತಿಯಿಂದ ಕಾಲರಾ ಮತ್ತು ಜಿಇಗೆ ಸಂಬಂಧಿಸಿದ ಮಾಹಿತಿಯನ್ನು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗಳಿಂದ ಜು.1ರಿಂದ 16ರವರೆಗೆ ನೋಂದಣಿಯಾದ ಪ್ರಕರಣಗಳ ವಿಳಾಸವನ್ನು ಪಡೆದು ಅಂತಹ ಸ್ಥಳಗಳಿಂದ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 4 ಮಾದರಿಯ ಫಲಿತಾಂಶವು ಕುಡಿಯಲು ಯೋಗ್ಯವಾಗಿರುತ್ತದೆ. ಉಳಿದ ಒಂದು ಮಾದರಿಗೆ ಸಂಬಂಧಿಸಿದ ಪ್ರದೇಶಗಳು ಜಲ ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲವೆಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News