×
Ad

ಕೋವಿಡ್-19: ಶಂಕಿತರ ಪರೀಕ್ಷಾ ವರದಿ ನೆಗೆಟಿವ್ ಆಗಿದ್ದರೆ ಬರಲಿದೆ ಎಸ್ಸೆಮ್ಮೆಸ್!

Update: 2020-07-19 10:54 IST

ಬೆಂಗಳೂರು, ಜು.19: ಇನ್ನು ಮುಂದೆ ಕೋವಿಡ್-19 ಪರೀಕ್ಷೆಗೆ ಒಳಗಾದ ವ್ಯಕ್ತಿಯ ಫಲಿತಾಂಶ ನೆಗೆಟಿವ್ ಆಗಿದ್ದಲ್ಲಿ ಆ ಬಗ್ಗೆ ಅವರ ಮೊಬೈಲ್ ಫೋನ್‌ಗೆ ಎಸ್ಸೆಮ್ಮೆಸ್ ಮೂಲಕ ಮಾಹಿತಿ ಬರಲಿದೆ.

ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಕೊರೋನ ಪರೀಕ್ಷೆಗೆ ಒಳಗಾದ ವ್ಯಕ್ತಿಗೆ ಸೋಂಕು ಇಲ್ಲ (ನೆಗೆಟಿವ್ ಫಲಿತಾಂಶ) ಎಂದು ದೃಢಪಟ್ಟಲ್ಲಿ ಕೂಡಲೇ ಸಂಬಂಧಪಟ್ಟವರಿಗೆ ಎಸ್ಸೆಮ್ಮೆಸ್ ಮೂಲಕ ಮಾಹಿತಿ ನೀಡುವಂತೆ ಕೋವಿಡ್- 19 ಪ್ರಯೋಗಾಲಯಗಳ ನೋಡೆಲ್ ಅಧಿಕಾರಿಗಳಿಗೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಕೋವಿಡ್ ಪರೀಕ್ಷೆಗೆ ಒಳಗಾದ ವ್ಯಕ್ತಿಗೆ ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆಯ ಲಕ್ಷಣಗಳು ಕಂಡುಬಂದಲ್ಲಿ ಉಚಿತ ಸಹಾಯವಾಣಿ 14410 ಅಥವಾ 104ಗೆ ಕರೆ ಮಾಡುವಂತೆ ಎಸ್ಸೆಮ್ಮೆಸ್‌ನಲ್ಲಿ ಉಲ್ಲೇಖಿಸುವಂತೆ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News