ಕೆನರಾ ಮೊಯ್ದೀನ್ ಹಾಜಿ
Update: 2020-07-19 18:42 IST
ಪುತ್ತೂರು: ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ನಿವಾಸಿ ಜವುಳಿ ಉದ್ಯಮಿ ಕೆನರಾ ಅಬ್ದುಲ್ ಖಾದರ್ ಯಾನೆ ಕೆನರಾ ಮೊಯ್ದೀನ್ ಹಾಜಿ (62) ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ನಗರದ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಕಾಂಪ್ಲೆಕ್ಸ್ ನಲ್ಲಿ ಜವುಳಿ ಅಂಗಡಿಯನ್ನು ಹೊಂದಿರುವ ಅವರು ಪುತ್ತೂರಿನ ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷರಾಗಿದ್ದಾರೆ.
ಮೃತರು ಪತ್ನಿ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.