ಕೊರೋನ ಸೋಂಕಿತರಿಗೆ ಬೆಡ್ ನೀಡದಿದ್ದರೆ ಕಠಿಣ ಕ್ರಮ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಕೆ

Update: 2020-07-19 17:48 GMT

ಬೆಂಗಳೂರು, ಜು.19: ಸರಕಾರದ ಆದೇಶದಂತೆ ಕೊರೋನ ಸೋಂಕಿತರಿಗೆ ಬೆಡ್‍ಗಳನ್ನು ನೀಡಬೇಕು. ಆದರೆ, ವೈದೇಹಿ ಆಸ್ಪತ್ರೆಯವರು 800 ಬೆಡ್‍ಗಳನ್ನು ನೀಡುವ ಬದಲು ಬರೀ 200 ಬೆಡ್‍ಗಳನ್ನು ನೀಡಿದ್ದು, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ನಿಮ್ಮ ಆಸ್ಪತ್ರೆಯ ವಿರುದ್ಧ ವಿಪತ್ತು ಕಾಯ್ದೆಯಡಿ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಭೆ ಕರೆದು ಖಾಸಗಿ ಆಸ್ಪತ್ರೆಗಳಿಗೆ ಆದೇಶ ನೀಡಿದ ಬೆನ್ನಲ್ಲೇ ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿದ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಪರಿಶೀಲನೆ ನಡೆಸಿದರು. ಸ್ಥಳದಲ್ಲೇ ಇದ್ದ ಆಸ್ಪತ್ರೆಯ ಸಿಬ್ಬಂದಿಗಳು ಆಸ್ಪತ್ರೆಯಲ್ಲಿ ಒಟ್ಟು 1 ಸಾವಿರ ಬೆಡ್‍ಗಳಿದ್ದು, 200 ಬೆಡ್‍ಗಳನ್ನು ಕೊರೋನ ಸೋಂಕಿತರಿಗೆ ನೀಡಿದ್ದೇವೆ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಂಜುನಾಥ್ ಪ್ರಸಾದ್ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ರೋಗಿಗಳಿಗೆ 800 ಬೆಡ್‍ಗಳನ್ನು ನೀಡಬೇಕು. ಆಸ್ಪತ್ರೆ ಮುಂಭಾಗ ಬೋರ್ಡ್ ಹಾಕಿ ಆಸ್ಪತ್ರೆಯಲ್ಲಿ ಎಷ್ಟು ಬೆಡ್‍ಗಳು ಖಾಲಿ ಇವೆ. ಎಷ್ಟು ರೋಗಿಗಳು ಒಳರೋಗಿಗಳಾಗಿದ್ದಾರೆ ಎಂಬುದರ ಬಗ್ಗೆ ತಿಳಿಸಬೇಕು. ಹಾಗೊಂದು ಬಾರಿ ಮಾಡದಿದ್ದರೆ ಆಸ್ಪತ್ರೆಯ ವಿರುದ್ಧ ವಿಪತ್ತು ಕಾಯ್ದೆ ಅಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News