×
Ad

ಮತ್ತೆ 18 ಪೊಲೀಸರಿಗೆ ಕೊರೋನ ಸೋಂಕು ದೃಢ

Update: 2020-07-20 20:21 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.20: ಕೊರೋನ ಸೈನಿಕರಾಗಿ ದುಡಿಯುತ್ತಿದ್ದ ಪೊಲೀಸ್ ಇಲಾಖೆಯ 18 ಸಿಬ್ಬಂದಿಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಸೋಮವಾರ 49 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದು ವಿಶ್ರಾಂತಿಯಲ್ಲಿದ್ದಾರೆ. ಇಲ್ಲಿಯವರೆಗೆ ಒಟ್ಟು 883 ಮಂದಿಗೆ ಕೊರೋನ ದೃಢವಾಗಿದೆ. 883ರ ಪೈಕಿ 604 ಮಂದಿ ಗುಣಮುಖರಾಗಿ 807 ಮಂದಿ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಲಾಕ್‍ಡೌನ್ ಭದ್ರತೆ, ಸೀಲ್‍ಡೌನ್, ಇನ್ನಿತರೆ ವಿಚಾರದಲ್ಲಿ ತಮ್ಮ ಕೆಲಸ ನಿರ್ವಹಣೆ ಮಾಡುವಾಗ ಪೊಲೀಸರಿಗೂ ಕೊರೋನ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News