ವಿಶ್ವನಾಥ ಎಮ್.ಅಮೀನ್ ಕಾಡಿಪಟ್ಣ
Update: 2020-07-21 16:33 IST
ಪಡುಬಿದ್ರಿ: ಎಸ್‍ಬಿಐನ ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಮೂಲತಃ ಪಡುಬಿದ್ರಿ-ಕಾಡಿಪಟ್ಣದ ಅಚ್ಚು ಎಮ್.ಬಂಗೇರ ನಿವಾಸದ ವಾಸಿ ವಿಶ್ವನಾಥ ಎಮ್.ಅಮೀನ್ ಕಾಡಿಪಟ್ಣ (76) ಮಂಗಳವಾರ ಮುಂಬೈ ಸಯನ್‍ನ ಸೋಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು.
ಕಾಡಿಪಟ್ಣ ಮೊಗವೀರ ಮಹಾಸಭಾದ ಮುಂಬೈ ಸಮಿತಿಯ ಸಕ್ರಿಯ ಸದಸ್ಯರಾಗಿ ಸಮಾಜದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದರು.
ಸರಳ ಸಜ್ಜನಿಕೆ ವ್ಯಕ್ತಿತ್ವದ ಅವರು ಪತ್ನಿ, ಪುತ್ರ, ಪುತ್ರಿ, ಸಹೋದರಿ, ಮತ್ತು ಪಡುಬಿದ್ರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯ ಎಮ್.ಅಮೀನ್ ಸಹಿತ 3 ಸಹೋದರರನ್ನು ಅಗಲಿದ್ದಾರೆ.