ಹಮೀದ್ ಮೊಯ್ದಿನ್ ಕಂದಕ್
Update: 2020-07-21 22:34 IST
ಮಂಗಳೂರು, ಜು.21: ಬಹರೈನ್‌ನಲ್ಲಿ ಉದ್ಯಮಿಯಾಗಿದ್ದ ಮೂಲತ ಮಂಗಳೂರಿನ ಕಂದಕ್ ನಿವಾಸಿ ಹಮೀದ್ ಮೊಯ್ದಿನ್(70) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬಹರೈನ್‌ನ ಆಸ್ಪತ್ರೆಯಲ್ಲಿ ನಿಧನರಾದರು. ಸುಮಾರು 50 ವರ್ಷಗಳಿಂದ ಬಹರೈನ್‌ನಲ್ಲಿ ಕುಟುಂಬ ಸಮೇತ ನೆಲೆಸಿರುವ ಹಮೀದ್ ಮೊಯ್ದಿನ್ ಅಲ್ಲಿ ಬಹರೈನ್‌ನ ರಾಷ್ಟ್ರೀಯತೆ ಪಡೆದಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಬಹರೈನ್‌ನಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.