ಅಗ್ನಿಶಾಮಕ ದಳದ ಎಂಟು ಸಿಬ್ಬಂದಿಗೆ ಕೊರೋನ ದೃಢ

Update: 2020-07-21 18:12 GMT

ಬೆಂಗಳೂರು, ಜು.21: ನಗರದ ವಿವಿಧ ಭಾಗಗಳಲ್ಲಿ ಸ್ಯಾನಿಟೈಸ್ ಮಾಡುವ ಜವಾಬ್ದಾರಿ ಹೊತ್ತ ಅಗ್ನಿಶಾಮಕ ಇಲಾಖೆಯ ಎಂಟು ಮಂದಿ ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.

ಒಟ್ಟು 8 ಸಿಬ್ಬಂದಿ ಕೊರೋನ ಸೋಂಕಿಗೆ ತುತ್ತಾಗಿದ್ದು, ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಕ್ಷಿಣ ವಿಭಾಗದ ಅಗ್ನಿಶಾಮಕ ಕಚೇರಿಯ ಆರ್‍ಎಫ್ ಸೇರಿ 6 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಉತ್ತರ ವಿಭಾಗದದಲ್ಲಿ ಇಬ್ಬರಿಗೆ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 8ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News