ಅಸ್ಸಾಂ: ಅನಿಲ ಬಾವಿಯಲ್ಲಿ ಸ್ಫೋಟ

Update: 2020-07-22 19:15 GMT

ಗುವಾಹಟಿ, ಜು.22: ಆಯಿಲ್ ಇಂಡಿಯಾ ಸಂಸ್ಥೆಗೆ ಸೇರಿದ ಬಾಘ್‌ಜನ್ ಅನಿಲ ಬಾವಿಯಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ಮೂವರು ವಿದೇಶಿ ತಜ್ಞರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅನಿಲ ಬಾವಿ ಸಂಖ್ಯೆ 5ರಲ್ಲಿ ಮೇ 27ರಂದು ಬ್ಲೋಔಟ್ ಕಾರ್ಯಾಚರಣೆ(ಅನಿಲ ಬಾವಿಯಿಂದ ನೈಸರ್ಗಿಕ ಅನಿಲವನ್ನು ಅನಿಯಂತ್ರಿತವಾಗಿ ಹೊರಬಿಡುವುದು)ಯ ಬಳಿಕ ಅನಿಲ ಸೋರಿಕೆಯಾಗುತ್ತಿತ್ತು.

ಜೂನ್ 9ರಂದು ಬೆಂಕಿ ಕಾಣಿಸಿಕೊಂಡು ಇಬ್ಬರು ಸಾವನ್ನಪ್ಪಿದ್ದರು. ಅಂದಿನಿಂದಲೂ ಬೆಂಕಿ ಉರಿಯುತ್ತಲೇ ಇತ್ತು. ಬೆಂಕಿ ನಂದಿಸುವ ಕಾರ್ಯಾಚರಣೆಗೆ ಆಗಮಿಸಿದ್ದ ವಿದೇಶಿ ತಜ್ಞರು ಬ್ಲೋಔಟ್ ತಡೆಗೆ ಸಾಧನಗಳನ್ನು ಜೋಡಿಸುವ ಸಂದರ್ಭ ಈ ಸ್ಫೋಟ ಸಂಭವಿಸಿದೆ. ಗಾಯಾಳುಗಳನ್ನು ಅಂತೋನಿ ಸ್ಟೀವನ್ ರೆನಾಲ್ಡ್ಸ್, ಡಗ್ ಡಲ್ಲಾಸ್ ಮತ್ತು ಕ್ರೆಗ್ ನೀಲ್ ಡಂಕನ್ ಎಂದು ಗುರುತಿಸಲಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಂಸ್ಥೆಯ ಹಿರಿಯ ಮ್ಯಾನೇಜರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News