×
Ad

ಬೆಂಗಳೂರು: ಕೊರೋನದಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾದ 109 ಪೊಲೀಸರು

Update: 2020-07-23 17:06 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.23: ಕೊರೋನ ಸೈನಿಕರಾಗಿ ಶ್ರಮಿಸಿದ ಅನೇಕ ಪೊಲೀಸರು ಕೊರೋನ ಸೋಂಕಿಗೆ ತುತ್ತಾಗಿದ್ದಾರೆ. ಅದರಲ್ಲಿ ಈಗ ಪೊಲೀಸ್ ಇಲಾಖೆಯ 109 ಜನ ಸಿಬ್ಬಂದಿ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಆಡಳಿತ ವಿಭಾಗದ ಐಜಿಪಿ ಹೇಮಂತ್ ನಿಂಬಾಳ್ಕರ್, ಪೊಲೀಸ್ ಸಿಬ್ಬಂದಿಗೆ ಕೊರೋನ ಸೋಂಕು ಬಂದು, ಆಸ್ಪತ್ರೆಗೆ ಹೋಗಿ ಎದೆಗುಂದದೆ ಚಿಕಿತ್ಸೆ ಪಡೆದು, ಮತ್ತೆ ಶಕ್ತಿಶಾಲಿಯಾಗಿ ವಾಪಸ್ ಆಗಿದ್ದಾರೆ. ಮತ್ತೆ ಮಾಸ್ಕ್, ಫೇಸ್‍ ಶೀಲ್ಡ್ ಹಾಕಿಕೊಂಡು ಕೆಲಸ ಮಾಡಲು ಸಿಬ್ಬಂದಿ ಸಿದ್ಧರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News