ಫಾತಿಮತ್ ಝಹುರಾ
Update: 2020-07-23 18:45 IST
ಮಂಗಳೂರು, ಜು.23: ಅಡ್ಡೂರಿನ ಮಂಜೊಟ್ಟಿ ಹೌಸ್‌ನ ದಿ. ಅಬ್ದುಲ್ ಖಾದರ್‌ರ ಪತ್ನಿ ಫಾತಿಮತ್ ಝಹುರಾ (60) ಗುರುವಾರ ಬೆಳಗ್ಗೆ ಸುಮಾರು 10 ಗಂಟೆಗೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ದಫನ ಕಾರ್ಯವು ಸಂಜೆ ಸುಮಾರು 5 ಗಂಟೆಗೆ ಅಡ್ಡೂರಿನಲ್ಲಿ ನಡೆಯಿತು. ಮೃತರು ಎಸ್ಕೆಎಸೆಸ್ಸೆಫ್ ಕರ್ನಾಟಕ ದಮ್ಮಾಮ್-ಅಲ್ ಖೋಬರ್ ಸಮಿತಿಯ ವಿಖಾಯ ಅಧ್ಯಕ್ಷ ಹೈದರ್ ಅಡ್ಡೂರು ಸಹಿತ ನಾಲ್ಕು ಮಂದಿ ಪುತ್ರರು ಮತ್ತು ನಾಲ್ಕು ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.