ಮನೆ ಬಾಗಿಲಿಗೆ ಕಬ್ಬಿಣದ ಶೀಟ್ ಹಾಕಿ ಸೀಲ್‍ಡೌನ್ ಮಾಡಿದ ಬಿಬಿಎಂಪಿ: ತೀವ್ರ ವಿರೋಧದ ಬಳಿಕ ತೆರವು

Update: 2020-07-23 16:27 GMT
Photo: Twitter

ಬೆಂಗಳೂರು, ಜು.23: ಕೊರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ಕಬ್ಬಿಣದ ಶೀಟ್‍ಗಳನ್ನು ಹಾಕಿ ಬಿಬಿಎಂಪಿಯು ಮನೆಯನ್ನು ಸೀಲ್‍ಡೌನ್ ಮಾಡಿದ್ದು, ಪಾಲಿಕೆಯ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಶೀಟ್ ಅನ್ನು ತೆರವುಗೊಳಿಸಲಾಗಿದೆ.

ಗುರುವಾರ ನಗರದ ಮನೆಯೊಂದನ್ನು ಕಬ್ಬಿಣದ ಶೀಟ್‍ನಿಂದ ಸೀಲ್‍ಡೌನ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯರೊಬ್ಬರು ಹರಿಬಿಟ್ಟಿದ್ದರು. ನಂತರ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 3 ಗಂಟೆಯೊಳಗೆ ಅದನ್ನು ತೆರವು ಮಾಡಲಾಯಿತು.

ಕೂಡಲೇ ಸ್ಥಳಕ್ಕೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಅರೋಗ್ಯ ಮತ್ತು ಅಗತ್ಯ ಸಾಮಗ್ರಿ ಪೂರೈಕೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ವಲಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಲ್ಲದೇ, ಪೂರ್ವ ವಲಯ ಅಧಿಕಾರಿ, ಕಂಟೈನ್ಮೆಂಟ್ ಮಾಡುವ ಮೇಲ್ವಿಚಾರಣೆ ಇಂಜಿನಿಯರ್ ಅವರಿಗೆ ನೊಟೀಸ್ ಜಾರಿಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News