ಸೌದಿ ದೊರೆಗೆ ಯಶಸ್ವಿ ಶಸ್ತ್ರಚಿಕಿತ್ಸೆ: ನ್ಯಾಯಾಲಯ

Update: 2020-07-24 17:13 GMT

ರಿಯಾದ್ (ಸೌದಿ ಅರೇಬಿಯ), ಜು. 24: ಸೌದಿ ಅರೇಬಿಯದ ದೊರೆ ಸಲ್ಮಾನ್‌ರ ಪಿತ್ತಕೋಶವನ್ನು ತೆಗೆಯುವ ಶಸ್ತ್ರಕ್ರಿಯೆಯನ್ನು ಗುರುವಾರ ಯಶಸ್ವಿಯಾಗಿ ನಡೆಸಲಾಯಿತು ಎಂದು ನ್ಯಾಯಾಲಯವೊಂದು ತಿಳಿಸಿದೆ.

84 ವರ್ಷದ ದೊರೆ ಆಸ್ಪತ್ರೆಗೆ ದಾಖಲಾದ ಮೂರು ದಿನಗಳ ಬಳಿಕ ಅವರಿಗೆ ಶಸ್ತ್ರಕ್ರಿಯೆ ನಡೆಸಲಾಗಿದೆ. ಅವರು 2015ರಿಂದ ಜಗತ್ತಿನ ಅತಿ ದೊಡ್ಡ ತೈಲ ರಫ್ತು ದೇಶವನ್ನು ಆಳುತ್ತಿದ್ದಾರೆ.

‘‘ಪಿತ್ತಕೋಶವನ್ನು ತೆಗೆಯುವುದಕ್ಕಾಗಿ ದೊರೆ ಇಂದು ರಿಯಾದ್‌ನಲ್ಲಿರುವ ಕಿಂಗ್ ಫೈಸಲ್ ಸ್ಪೆಶಲಿಸ್ಟ್ ಆಸ್ಪತ್ರೆಯಲ್ಲಿ ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಒಳಗಾದರು’’ ಎಂದು ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ರಾಯಲ್ ಕೋರ್ಟ್ ತಿಳಿಸಿದೆ. ಈ ಹೇಳಿಕೆಯನ್ನು ಸೌದಿ ಅರೇಬಿಯದ ಅಧಿಕೃತ ಸುದ್ದಿಸಂಸ್ಥೆ ಸೌದಿ ಪ್ರೆಸ್ ಏಜನ್ಸಿ ಪ್ರಕಟಿಸಿದೆ.

‘‘ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ದೊರೆಯು ಸ್ವಲ್ಪ ಸಮಯ ಆಸ್ಪತ್ರೆಯಲ್ಲೇ ಉಳಿಯುವರು’’ ಎಂದು ಹೇಳಿಕೆ ತಿಳಿಸಿದೆ.

ಸೌದಿ ದೊರೆಯನ್ನು ಸೋಮವಾರ ಪಿತ್ತಕೋಶದ ಊತದ ಹಿನ್ನೆಲೆಯಲ್ಲಿ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News