ಕನ್ನಡಪರ ಹೋರಾಟಗಾರ ನಾಗೇಶ್ ಕೊರೋನ ಸೋಂಕಿಗೆ ಬಲಿ
Update: 2020-07-25 22:39 IST
ಬೆಂಗಳೂರು, ಜು.25: ಕೋವಿಡ್-19 ಸೋಂಕಿನಿಂದ ಕನ್ನಡಪರ ಹೋರಾಟಗಾರ ನಾಗೇಶ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಕೊರೋನ ಸೋಂಕಿನಿಂದ ಕನ್ನಡಪರ ಹೋರಾಟಗಾರ ನಾಗೇಶ್ ಕಳೆದ ಹತ್ತು ದಿನಗಳ ಹಿಂದೆ ನಾಗೇಶ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಜ್ವರದಿಂದ ಬಳಲುತ್ತಿದ್ದ ಅವರು ಮಾತ್ರೆ ಸೇವಿಸಿದ್ದರಿಂದ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು ಎನ್ನಲಾಗಿದೆ.
ಹೀಗಾಗಿ ಎರಡು ದಿನಗಳ ಹಿಂದೆ ಸುಂಕದಕಟ್ಟೆ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ನಾಗೇಶ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ನಾಗೇಶ್ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಗೇಶ್ ಅವರ ನಿಧನಕ್ಕೆ ಕನ್ನಡಪರ ಸಂಘಟನೆಗಳ ಹೋರಾಟಗಾರರು ಸೇರಿದಂತೆ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.