×
Ad

ಬೆಂಗಳೂರು: ಚಿನ್ನ ತಯಾರಿಸುವ ಅಂಗಡಿಗೆ ನುಗ್ಗಿ ಮಣ್ಣು ಕದ್ದೊಯ್ದ ಕಳ್ಳರು

Update: 2020-07-25 22:49 IST

ಬೆಂಗಳೂರು, ಜು.25: ಮಾಸ್ಕ್ ಧರಿಸಿ ಚಿನ್ನದಂಗಡಿ ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಕಬ್ಬಿಣದ ಪೆಟ್ಟಿಗೆಯಲ್ಲಿದ್ದ ಮಣ್ಣು ಕದ್ದೊಯ್ದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಲ್ಲಿನ ಅಂಚೆಪೇಟೆ ಬಳಿಯ ಚಿನ್ನ ತಯಾರಿಸುವ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಣ್ಣು ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜು.17ರಂದು ಅಂಗಡಿ ಮಾಲಕ ಸೋಮಶೇಖರ್ ಎಂದಿನಂತೆ ಬೀಗ ಹಾಕಿ ಮನೆಗೆ ಹೋಗಿದ್ದಾರೆ. ಅದೇ ದಿನ ರಾತ್ರಿ ಬಂದ ಆರೇಳು ಮಂದಿ ದುಷ್ಕರ್ಮಿಗಳು, ಶೆಟರ್ ಬೀಗ ಮುರಿದು ಅಂಗಡಿಯಲ್ಲಿದ್ದ ಎರಡು ಚೀಲವಾಗುವಷ್ಟು ಮಣ್ಣು ಕದ್ದೊಯ್ದಿದ್ದಾರೆ. ಜೊತೆಗೆ 20 ಸಾವಿರ ನಗದು, ಹವಳ ಸರಗಳು ಸೇರಿ ವಿವಿಧ ವಸ್ತುಗಳನ್ನು ದೋಚಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಕೆಆರ್ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News