×
Ad

ಜು.27ರಂದು ಆನ್‌ಲೈನ್‌ನಲ್ಲಿ ಸರಕಾರದ ಕಾರ್ಯನಿರ್ವಹಣಾ ವರದಿ ನೀಡಲಿರುವ ಸಿಎಂ

Update: 2020-07-26 14:50 IST

ಬೆಂಗಳೂರು, ಜು.26: ರಾಜ್ಯ ಬಿಜೆಪಿ ಸರಕಾರಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಜು.27ರಂದು ಆನ್‌ಲೈನ್ ಸಮಾರಂಭದ ಮೂಲಕ ಸರಕಾರದ ಕಾರ್ಯನಿರ್ವಹಣೆಯ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನರ ಮುಂದಿಡಲಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಯಡಿಯೂರಪ್ಪ, ‘‘ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ, ಜು.27ರಂದು, ಪೂರ್ವಾಹ್ನ 11 ಗಂಟೆಯಿಂದ ನಡೆಯುವ ಸರಳ ಆನ್‌ಲೈನ್ ಸಮಾರಂಭದ ಮೂಲಕ ಸರಕಾರರದ ಕಾರ್ಯನಿರ್ವಹಣಾ ವರದಿಯನ್ನು ರಾಜ್ಯದ ಜನತೆಯ ಮುಂದಿಡಲಿದ್ದೇನೆ. ಕಾರ್ಯಕ್ರಮದ ನೇರಪ್ರಸಾರವಿರಲಿದೆ’’ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News